Daily Horoscope
✕

ಖಾರ ಅಗತ್ಯಕ್ಕಿಂತ ಜಾಸ್ತಿಯಿದ್ರೆ ಒಳ್ಳೇದಲ್ಲ: ನಾರಾ ಲೋಕೇಶ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

Krishnaveni K
ಶುಕ್ರವಾರ, 17 ಅಕ್ಟೋಬರ್ 2025 (11:48 IST)
ಬೆಂಗಳೂರು: ಗೂಗಲ್ ಎಐ ಹಬ್ ಆಂಧ್ರಪ್ರದೇಶಕ್ಕೆ ಶಿಫ್ಟ್ ಆದ ಬಗ್ಗೆ ತಮಗೆ ಟಾಂಗ್ ನೀಡಿದ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಗೆ ಕರ್ನಾಟಕ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಆಂಧ್ರಪ್ರದೇಶ ಗೂಗಲ್ ಸಂಸ್ಥೆಗೆ ಸಬ್ಸಿಡಿ ದರದಲ್ಲಿ ಭೂಮಿ, ಉಚಿತ ವಿದ್ಯುತ್ ನೀಡಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ನಾರಾ ಲೋಕೇಶ್ ನಮ್ಮ ಆಂಧ್ರದ ಊಟ ಸ್ವಲ್ಪ ಖಾರ ಅಂತಾರೆ. ನಮ್ಮ ನೆರೆಹೊರೆಯವರಿಗೂ ಈಗ ಖಾರದ ಅನುಭವವಾಗುತ್ತಿರಬೇಕು ಎಂದು ಲೇವಡಿ ಮಾಡಿದ್ದರು.

ಇದಕ್ಕೀಗ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ಎಲ್ಲರೂ ಸ್ವಲ್ಪ ಖಾರ ತಿನ್ನುವುದನ್ನು ಇಷ್ಟಪಡುತ್ತಾರೆ, ಆದರೆ ಅದನ್ನೇ ತಿನ್ನಲು ಸಾಧ್ಯವಿಲ್ಲ. ಆಹಾರ ತಜ್ಞರು ಹೇಳುವಂತೆ ಸಮತೋಲಿತ ಆಹಾರವೇ ಸರಿ. ಅದೇ ರಿತಿ ಬಜೆಟ್ ವಿಚಾರದಲ್ಲೂ ಸಮತೋಲನ ಅಗತ್ಯ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ನಮ್ಮ ನೆರೆಹೊರೆಯವರ ಸಾಲ 10 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಅವರು 1.16 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಿಡಿಪಿ ದರ 3.61 ರಿಂದ 2.65 ಕ್ಕೆ ಇಳಿಕೆಯಾಗಿದೆ. ಯಾರು ಏನೇ ಹೇಳಲಿ ನಾವು ಬೇರೆಯವರಿಗೆ ಶತ್ರುಗಳಾಗಿರಬಹುದು, ನಮ್ಮವರ ಹೆಮ್ಮೆಯಾಗಿ ಉಳಿಯುತ್ತೇವೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧೈರ್ಯವಿದ್ದರೆ ಅರೆಸ್ಟ್ ಮಾಡಿ ನೋಡಿ: ದೆಹಲಿ ಪೊಲೀಸರಿಗೆ ಸವಾಲೆಸೆದ ಕಾಕ್ರೋಚ್ ಯುವತಿಗೆ ತಥಾಸ್ತು ಎಂದ ಹಿರಿಯ ಅಧಿಕಾರಿ Video

ಕ್ಷಣಾರ್ಧದಲ್ಲಿ ಸಾಕುನಾಯಿಯ ಜೆಕೆಟ್‌ನ್ನೇ ಎಗರಿಸಿದ ಬೀದಿ ನಾಯಿ: ಫನ್ನಿ Video

ಮಹಿಳೆಯ ಸೊಂಟಕ್ಕೇ ಕೈ ಹಾಕಿದ ಶಾಸಕ… ಇಬ್ರಾಹಿಂಪಟ್ನಂ ಶಾಸಕನ ವರ್ತನೆಗೆ ನೆಟ್ಟಿಗರ ಆಕ್ರೋಶ Video

ಇಂಥಾ ಕ್ರೂರಿಗಳೂ ಇರ್ತಾರಾ…ಸಿಸಿಟಿವಿಯಲ್ಲಿ ದಾಖಲಾದ ಈ ದೃಶ್ಯ ನೋಡಿದ್ರೆ ನೀವೂ ಶಾಕ್ ಆಗ್ತೀರಿ Video

ನೀವು ಪ್ರತಿನಿತ್ಯ ಬಳಸುವ ಈ ಒಂದು ಅಗತ್ಯ ವಸ್ತು ಅಕ್ಟೋಬರ್ 27 ರ ನಂತರ ದುಬಾರಿ

ಮುಂದಿನ ಸುದ್ದಿ
Show comments