Publish Date: Wed, 13 Oct 2021 (17:45 IST)
Updated Date: Wed, 13 Oct 2021 (18:52 IST)
ವಸೂಲಿಗೆ ಇಳಿದ ಖಾಸಗಿ ಬಸ್ ಗಳಿಗೆ ಶಾಕ್ ನೀಡಿದ "ಸ್ಪೆಷಲ್ ಸ್ಕ್ವಾಡ್"
..!!!!
ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆ ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಗರದ ಪ್ರಮುಖ ಖಾಸಗಿ ಬಸ್ ನಿಲ್ದಾಣಗಳಲ್ಲಿ 10 ಜನ ಸ್ಕ್ವಾಡ್ಗಳನ್ನ ನೇಮಕ ಮಾಡಲಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆ ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಹಬ್ಬಕ್ಕೆಂದು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇದರಿಂದ ಸಾರಿಗೆ ಇಲಾಖೆ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸ್ವ್ಕಾಡ್ಗಳನ್ನ ನೇಮಿಸಿದ್ದಾರೆ. ಬಸ್ನಲ್ಲಿರುವ ಸೀಟ್ ಲಿಮಿಟ್ನಷ್ಟೇ ಪ್ರಯಾಣಿಕರು ಸಂಚರಿಸಬೇಕು. ಲೇಗೆಜ್ ಸ್ಟಾಂಡ್ಗಳಲ್ಲಿ ಜನರನ್ನ ಕೂರಿಸಿದರೆ ಸಾರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.