Select Your Language

Notifications

webdunia
webdunia
webdunia
webdunia

ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಚಾಲಕನ ದರ್ಪ!

ಚಾಲಕರ ಕಿತ್ತಾಟ
ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲ್ಲಿಸಿ ಚಾಲಕನೊಬ್ಬ ದರ್ಪ ತೋರಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲ್ಲಿಸಿದ್ದನ್ನ ಸಾರಿಗೆ ಬಸ್ ಚಾಲಕ ಪ್ರಶ್ನಿಸಿದ್ದಕ್ಕೆ ಬಸ್ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೆಲ ಹೊತ್ತು ಬಸ್  ಸಂಚಾರ ಸ್ಥಗಿತಗೊಂಡಿತ್ತು. ಬಸ್ ಬಿಡುವ ವಿಚಾರವಾಗಿ ಈ ಜಗಳ ನಡೆದಿದ್ದು ಖಾಸಗಿ ಬಸ್ ಚಾಲಕ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ದರ್ಪ ಮೆರೆದಿದ್ದಾನೆ. ಇನ್ನೂ ಈ ವೇಳೆ ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆಗೂ ಕೂಡ ಖಾಸಗಿ ಬಸ್ ಚಾಲಕ ಮುಂದಾಗಿದ್ದಾನೆ. ಚನ್ನಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರ ಜೊತೆ ಮಾತುಕತೆ ನಡೆಸಿ ಜಗಳ ಬಗೆ ಹರಿಸಿದ ನಂತರ ಬಸ್ ಸಂಚಾರ ಆರಂಭಗೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಸಮ್ಮುಖದಲ್ಲೆ ಟಿಕೆಟ್ ಗಾಗಿ ಕಿತ್ತಾಟ