ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

Sampriya
ಭಾನುವಾರ, 23 ನವೆಂಬರ್ 2025 (12:10 IST)
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿ ಅಂತಿಮಗೊಂಡಿದೆ. ಪ್ರಧಾನಿ ಕಚೇರಿಯಿಂದ ವೇಳಾಪಟ್ಟಿ ಬಿಡುಗಡೆಯಾಗಿದೆ. ನ.28ರಂದು ಉಡುಪಿ ಶ್ರೀಕೃಷ್ಣಮಠಕ್ಕೆ ಆಗಮಿಸುತ್ತಿದ್ದು, ಹೆಲಿಪ್ಯಾಡ್‌, ಕಾಂಕ್ರೀಟ್‌ ರಸ್ತೆ, ಭದ್ರತಾ ವ್ಯವಸ್ಥೆ ಸಹಿತ ಮೂಲ ಸೌಲಭ್ಯಗಳ ತಯಾರಿ ವೇಗವಾಗಿ ಸಾಗುತ್ತಿದೆ.

ಪ್ರಧಾನಿ ಅವರು ದೆಹಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬೆಳಗ್ಗೆ 11:05 ಕ್ಕೆ ಬರಲಿದ್ದಾರೆ. ಅಲ್ಲಿಂದ ಬೆಳಿಗ್ಗೆ 11:10 ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ.

ಈ ಹಿಂದೆ ಪ್ರಧಾನಿಯವರ ಸ್ವಾಗತಕ್ಕಾಗಿ ರೋಡ್ ಶೋ ನಡೆಸಲು ಯೋಜಿಸಲಾಗಿತ್ತು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ರೋಡ್ ಶೋ ರದ್ದುಗೊಳಿಸಲಾಗಿದೆ. ಹೆಲಿಪ್ಯಾಡ್‌ನಿಂದ ನೇರವಾಗಿ ಮಧ್ಯಾಹ್ನ 12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಮೋದಿ, ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ತದನಂತರ ಐತಿಹಾಸಿಕ ಲಕ್ಷ ಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವೇಳಾಪಟ್ಟಿ ಹೀಗಿದೆ: ಬೆಳಗ್ಗೆ 8.15: ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಪಯಣ, ಬೆಳಗ್ಗೆ 11.05: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ,    ಬೆಳಗ್ಗೆ 11.10: ಹೆಲಿಕಾಪ್ಟರ್‌ ಮೂಲಕ ಪಯಣ, ಬೆಳಗ್ಗೆ 11.35: ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮನ, ಬೆಳಗ್ಗೆ 11.45: ಆದಿ ಉಡುಪಿ ಹೆಲಿಪ್ಯಾಡ್‌ನಿಂದ ರಸ್ತೆ ಪಯಣ,    ಮಧ್ಯಾಹ್ನ 12: ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 

ಮಧ್ಯಾಹ್ನ 12ರಿಂದ 1.30: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಶ್ರೀ ಭೇಟಿ, ಮಧ್ಯಾಹ್ನ 1.35: ಶ್ರೀಕೃಷ್ಣಮಠದಿಂದ ನಿರ್ಗಮನ, ಮಧ್ಯಾಹ್ನ 1.45: ಹೆಲಿಕಾಪ್ಟರ್‌ ಮೂಲಕ ಮಂಗಳೂರು ವಿಮಾನ ನಿಲ್ದಾಣ, 2.15: ವಾಯುಪಡೆ ವಿಮಾನ ಮೂಲಕ ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣಕ್ಕೆ ಪಯಣ. 3.05: ದಾಬೋಲಿಂ ವಿಮಾನ ನಿಲ್ದಾಣದಿಂದ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಡಳಿತ ಯಂತ್ರವು ಕೋಮಾ ಸ್ಥಿತಿಗೆ ತಲುಪಿದೆ: ಸಿಎಂ ಯಾರೆಂದು ಮೊದಲು ಸ್ಪಷ್ಟಪಡಿಸಿ ಎಂದ ಅಶೋಕ್‌

Karnataka Weather:ಹಿಂಗಾರು ಮಳೆ ಮತ್ತೆ ಚುರುಕು, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಮಲ್ಲಿಕಾರ್ಜುನ ಖರ್ಗೆ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕಿಂಗ್‌ ಹೇಳಿಕೆ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಮುಂದಿನ ಸುದ್ದಿ
Show comments