ಡಿಕೆಶಿ ಇಷ್ಟೆಲ್ಲಾ ಮಾಡೋ ಬದಲು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿದ್ರೆ ಸಾಕಾಗ್ತಿತ್ತು

Krishnaveni K
ಭಾನುವಾರ, 23 ನವೆಂಬರ್ 2025 (12:07 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಸದ್ದು ಮಾಡುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗಳಾಗುತ್ತಿವೆ.

ಡಿಕೆ ಶಿವಕುಮಾರ್ ತಮ್ಮ ಬಣದ ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಆದರೂ ಹೈಕಮಾಂಡ್ ಯಾಕೋ ಅಷ್ಟು ಸುಲಭವಾಗಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಯೋಚನೆ ಮಾಡುತ್ತಿಲ್ಲ. ಹೀಗಾಗಿ ಡಿಕೆಶಿ ನಾನಾ ರೀತಿಯ ರಣ ತಂತ್ರ ಹೆಣೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ‘ಡಿಕೆ ಸಾಹೇಬ್ರು ಇಷ್ಟೆಲ್ಲಾ ಕಷ್ಟಪಡುವ ಬದಲು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಅಮಿತ್ ಶಾ ಜೊತೆಗಿರುವ ತಮ್ಮದೊಂದು ಫೋಟೋ ಹಾಕಿಕೊಂಡ್ರೂ ಸಾಕಿತ್ತಪ್ಪಾ. ತಕ್ಷಣವೇ ಕೆಲಸ ಆಗಿಬಿಡೋದು’ ಎಂದು ಕಿಚಾಯಿಸುತ್ತಿದ್ದಾರೆ.

ಅಂದರೆ ಡಿಕೆ ಶಿವಕುಮಾರ್ ಅವರನ್ನು ಅಮಿತ್ ಶಾ ಭೇಟಿಯಾಗಿದ್ದಾರೆಂದು ತಿಳಿದರೆ ತಕ್ಷಣವೇ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಳ್ಳುತ್ತದೆ. ಎಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭಯಕ್ಕೆ ಡಿಕೆಶಿ ಕೇಳಿದ ಸ್ಥಾನ ಕೊಟ್ಟುಬಿಡುತ್ತದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಡಳಿತ ಯಂತ್ರವು ಕೋಮಾ ಸ್ಥಿತಿಗೆ ತಲುಪಿದೆ: ಸಿಎಂ ಯಾರೆಂದು ಮೊದಲು ಸ್ಪಷ್ಟಪಡಿಸಿ ಎಂದ ಅಶೋಕ್‌

Karnataka Weather:ಹಿಂಗಾರು ಮಳೆ ಮತ್ತೆ ಚುರುಕು, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಮಲ್ಲಿಕಾರ್ಜುನ ಖರ್ಗೆ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕಿಂಗ್‌ ಹೇಳಿಕೆ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಮುಂದಿನ ಸುದ್ದಿ
Show comments