Select Your Language

Notifications

webdunia
webdunia
webdunia
webdunia

ನನ್ನ ಪರವಾಗಿ ಪ್ರಚಾರಕ್ಕೆ ಪ್ರಧಾನಿ ಬರ್ತಾರೆ : ಎಸ್ ಟಿ ಸೋಮಶೇಖರ್

ನನ್ನ ಪರವಾಗಿ ಪ್ರಚಾರಕ್ಕೆ ಪ್ರಧಾನಿ ಬರ್ತಾರೆ : ಎಸ್ ಟಿ ಸೋಮಶೇಖರ್
bangalore , ಮಂಗಳವಾರ, 25 ಏಪ್ರಿಲ್ 2023 (20:50 IST)
ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳ ಪ್ರಚಾರ ಅಬ್ಬರದಿಂದ ಸಾಗುತ್ತಿದೆ.... ಅದೇ ರೀತಿ ಯಶವಂತಪುರ ಬಿಜೆಪಿ ಅಭ್ಯರ್ಥಿಯಾದ ಸಹಕಾರ ಸಚಿವರಾದ ಎಸ್ ಟಿ ಶೋಮಶೇಖರ್ ಅವರೂ ಸಹ ಈಗಾಗಲೇ ಪ್ರಚಾರವನ್ನು ಶುರು ಮಾಡಿದ್ದು ಈ ಕುರಿತಂತೆ ಇಂದು ಕೆಂಗೇರಿಯ ಬಿಜೆಪಿ ಕಚೇರಿಯಲ್ಲೂ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ.ಯಶವಂತಪುರದ 490 ಬೂತ್ ಗಳಗೆ ನಾನು ಈಗಾಗಲೇ ಓಡಾಡಿದ್ದೇನೆ...ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಬೂಕ್ಲೆಟ್ ಹಂಚಲಾಗಿದೆ...ಸಹಕಾರ ಸಚಿವನಾಗಿ ನಾನು ನನ್ನ ಕ್ಷೆತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ... ಜನರ ಕಣ್ಣೀರು ಒರೆಸೋ ಕೆಲಸ ಮಾಡಿದ್ದೇನೆ ಹೊರೆತು ಕಣ್ಣೀರು ಹಾಕೋ ಕಾರ್ಯಕ್ರಮ ನಾನು ಮಾಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಕ್ಕೆ ಟಾಂಗ್ ಕೊಟ್ಟಿದ್ದಾರೆ..... ಇನ್ನು ನಮ್ಮ ಕ್ಷೇತ್ರಕ್ಕೆ ನಮ್ಮ ಪಕ್ಷದ ಎಲ್ಲಾ ಕಾರ್ಯಕ್ರಮ ನೂರಕ್ಕೆ ನೂರು ಮಾಡಿದ್ದೀವಿ...29 ಕ್ಕೆ ಮೋದಿ ಅವರು ನನ್ನ ಕ್ಷೇತ್ರದಲ್ಲಿ ರೋಡ್ ಶೋ ಮಾಡ್ತಾರೆ ಈ ಒಂದು ರೋಡ್ ಶೋ  ನಲ್ಲಿ ಸುಮಾರು 50 ಸಾವಿರ ಮೇಲ್ಪಟ್ಟು ಜನ ಭಾಗವಹಿಸುತ್ತಾರೆ...ನೆಲಮಂಗಲ ನೈಸ್ ರೋಡ್ ಜೇಂಕ್ಷನ್ ಅಲ್ಲಿ ಲ್ಯಾಂಡ್ ಆಗ್ತಾರೆ...ಮಾಗಡಿ ರಸ್ತೆಯಿಂದ ಸುಂಕದಕಟ್ಟೆ ವರೆಗೂ ರೋಡ್ ಶೋ ನಡಿಯುತ್ತೆ....ಯಾವೊಂದು ಕಾರ್ಯಕ್ರಮ ರಾಜ್ಯ, ಸರ್ಕಾರ ಕೇಂದ್ರ ಸರ್ಕಾರ ಕೊಡಲಿ  ನೂರಕ್ಕೆ ನೂರು ಸಕ್ಸಸ್ ಆಗಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತ ಪಡಿದಿಸ್ರು

Share this Story:

Follow Webdunia kannada

ಮುಂದಿನ ಸುದ್ದಿ

27ರಂದು 50 ಲಕ್ಷ ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ಸಂವಾದ