Publish Date: Tue, 25 Apr 2023 (19:54 IST)
Updated Date: Tue, 25 Apr 2023 (19:56 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ರಾಜಕೀಯ ತಂತ್ರ ಪ್ರಯೋಗಿಸಲಾಗುತ್ತಿದೆ.. ಶರತ್ ಕುಮಾರ್ ಬಚ್ಚೇಗೌಡ ಎಂಬ ಹೆಸರಿನ ವ್ಯಕ್ತಿ ಸಹ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದು, ಕುಕ್ಕರ್ ಚಿಹ್ನೆ ವಿತರಣೆ ಮಾಡಲಾಗಿದೆ. ಕಳೆದ 2019ರ ಉಪಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಪಕ್ಚೇತರರಾಗಿ ಕುಕ್ಕರ್ ಚಿಹ್ನೆ ಪಡೆದು ಸ್ಪರ್ಧಿಸಿದ್ರು.. ಈ ಬಾರಿ ಮತದಾರರನ್ನು ದಾರಿ ತಪ್ಪಿಸಲು ಶರತ್ ಕುಮಾರ್ ಬಚ್ಚೇಗೌಡ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಹೊಸಕೋಟೆಯಲ್ಲಿ ಈಗ ಬಿಜೆಪಿ ಅಭ್ಯರ್ಥಿ, ಸಚಿವ ಎಂಟಿಬಿ ನಾಗರಾಜ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ನಡುವೆ ನೇರ ಪೈಪೋಟಿಯಿದೆ.