Daily Horoscope

Select Your Language

Notifications

webdunia
webdunia
webdunia
webdunia

ಟ್ರಸ್ಟ್ ಜಾಗದ ವಿಚಾರವಾಗಿ ಬೆದರಿಕೆ

ಟ್ರಸ್ಟ್ ಜಾಗದ ವಿಚಾರವಾಗಿ ಟ್ರಸ್ಟಿಗಳಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಬಿಎಲ್ ಸುರೇಶ್ ಎಂಬಾತ ಕುಂಬಾರಪೇಟೆ ಟ್ರಸ್ಟಿನ ಸದಸ್ಯರಿಗೆ,ಅಧ್ಯಕ್ಷರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್, ಕುಂಬಾರಪೇಟೆ ಆಂಜನೇಯಸ್ವಾಮಿ ಟೆಂಪಲ್ ಬಿಲ್ಡಿಂಗ್ ಸಮಿತಿ ಟ್ರಸ್ಟ್, ಕುಂಬಾರಪೇಟೆ ಅನ್ನದಾನ ಸಮಿತಿ ಕಲ್ಯಾಣ ಮಂದಿರ ಟ್ರಸ್ಟ್  ಜಾಗಕ್ಕಾಗಿ ಬಿಎಲ್ ಸುರೇಶ್ ಕ್ಯಾತೆ ತೆಗೆದಿದ್ದಾರಂತೆ. ಸುರೇಶ್  ಕಟ್ಟಡದ ಬಾಡಿಗೆ ಪಡೆದು ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಅನ್ನದಾನ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ ಮುನಿಸ್ವಾಮಿ ಹಾಗು ಇತರರಿಂದ ಬೆದರಿಕೆ ಹಾಕಿದ್ದಾರೆ ಅನ್ನೊ ಆರೋಪ ಇದೆ. ಈ ಹಿಂದೆ ಬಿಎಲ್ ಸುರೇಶ್ ತಂದೆ ಬಿ ಲಿಂಗಪ್ಪ ಆಂಜನೇಯಸ್ವಾಮಿ ಟೆಂಪಲ್ ಬಿಲ್ಡಿಂಗ್ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಇದನ್ನೆ ನೆಪ ಮಾಡಿಕೊಂಡು ಹಲವು ತಿಂಗಳಿಂದ ತಾನೇ ಅಧ್ಯಕ್ಷ ಎಂದು ಬಿಂಬಿಸಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದಾರಂತೆ. ಅಲ್ಲದೆ  ಕೋರ್ಟ್ ಕೂಡ ಸುರೇಶ್ ಗೆ ಟ್ರಸ್ಟ್ ತಂಟೆಗೆ ಹೋಗಬಾರದು ಎಂದು ಸೂಚಿಸಿಲಾಗಿತ್ತು. ಆದ್ರೂ ಕೂಡ  ಟ್ರಸ್ಟಿಗಳಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಅಂತ ಮತ್ತೆ ಬಿಎಲ್ ಸುರೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ : ದೇವನೂರ ಮಹಾದೇವ