ಅಪ್ರಾಪ್ತನ ಅಪಹರಣ ಯತ್ನ – ಜನರ ಕೈಗೆ ಸಿಕ್ಕಿಬಿದ್ದ ದುಷ್ಕರ್ಮಿಗಳಿಗೆ ಆಗಿದ್ದೇನು?

Webdunia
ಬುಧವಾರ, 4 ಡಿಸೆಂಬರ್ 2019 (20:30 IST)
ಹಾಡಹಗಲೇ ಬಾಲಕನೊಬ್ಬನ ಅಪಹರಣಕ್ಕೆ ಯತ್ನಿಸಿದ ದುಷ್ಕರ್ಮಿಗಳು ಸಾರ್ವಜನಿಕರ  ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ರಾಯಭಾಗ ತಾಲೂಕಿನ ಮುಗಳಕೋಡ ಗ್ರಾಮದ ಏಳು ವರ್ಷದ ಅಪ್ರಾಪ್ತ ಬಾಲಕನಿಗೆ ಮದ್ಯ ಕುಡಿಸಿ, ಅಸ್ವಸ್ಥಗೊಂಡ ಆತನನ್ನು ಮುವತ್ತು ಕಿಲೋ ಮೀಟರ್ ದೂರದ ಅಥಣಿ ಪಟ್ಟಣಕ್ಕೆ ಕರೆತರಲಾಗಿತ್ತು. ಯಾವ ಉದ್ದೇಶಕ್ಕಾಗಿ ಬಾಲಕನ ಅಪಹರಣಕ್ಕೆ ಯತ್ನಿಸಲಾಗಿದೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

ಸಂಶಯಗೊಂಡು ಆರೋಪಿಗಳನ್ನು ಹಿಡಿದು ಸಾರ್ವಜನಿಕರು ವಿಚಾರಿಸಿದಾಗ ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ವಿಷ್ಣಪ್ಪ ಹತ್ತಿಹಾಳ ಹಾಗೂ ಗುಲ್ಬರ್ಗ ಮೂಲದ ವಿಶ್ವನಾಥ ಪಾಟೀಲ ಇಬ್ಬರನ್ನೂ ಅಥಣಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಿಯೋ ಫೋನ್ ನಲ್ಲಿ ಬಳಸಿದ್ರೆ ಅದಾನಿಗೆ ದುಡ್ಡು: ರಾಹುಲ್ ಗಾಂಧಿ ಹೇಳಿಕೆ ಭಾರೀ ಟ್ರೋಲ್ video

ಹೃದಯದ ಆರೋಗ್ಯಕ್ಕೆ ಡಾ ದೇವಿಪ್ರಸಾದ್ ಶೆಟ್ಟಿಯವರ ಈ ಟಿಪ್ಸ್ ತಪ್ಪದೇ ಫಾಲೋ ಮಾಡಿ

ಸೇನೆಯಲ್ಲಿ ಮೇಲ್ಜಾತಿಯವರದ್ದೇ ಕಂಟ್ರೋಲ್ ಎಂದ ರಾಹುಲ್ ಗಾಂಧಿ: ಸೇನೆಯಲ್ಲೂ ಜಾತಿ ಹುಡುಕ್ತಿದ್ದಾರೆ ಎಂದ ಬಿಜೆಪಿ

Karnataka Weather: ಇಂದೂ ಇದೆ ಈ ಜಿಲ್ಲೆಗಳಿಗೆ ಮಳೆಯ ಸೂಚನೆ

ಮುಂದಿನ ಸುದ್ದಿ