Select Your Language

Notifications

webdunia
webdunia
webdunia
webdunia

ಪ್ರೀತ್ಸೆ ಅಂತ ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಜೀವಾವಧಿ ಶಿಕ್ಷೆ

ಪ್ರೀತ್ಸೆ ಅಂತ ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಜೀವಾವಧಿ ಶಿಕ್ಷೆ
ಕಲಬುರಗಿ , ಶುಕ್ರವಾರ, 25 ಅಕ್ಟೋಬರ್ 2019 (17:24 IST)
ಅವಳು ಇನ್ನೂ ಅಪ್ರಾಪ್ತ ಹುಡುಗಿ. ಆದರೆ ಹುಡುಗಿಯ ವಯಸ್ಸನ್ನೂ ನೋಡದ ಆತ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದನು. ಅಷ್ಟೇ ಅಲ್ಲ, ಲವ್ ಹೆಸರಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದೀಗ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಕಲಬುರಗಿಯ ಬೆಣ್ಣೂರು ಬಿ ಗ್ರಾಮದ ಆರೋಪಿ ಚಂದ್ರಕಾಂತ ತಂದೆ ಶಿವಲಿಂಗ ತನ್ನದೇ ಗ್ರಾಮದ ಹುಡುಗಿಯ ಮೇಲೆ ರೇಪ್ ಮಾಡಿದ್ದನು. ಮಾತನಾಡೋದಿದೆ ಅಂತ ಹೊಲಕ್ಕೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದನು.

ಅಷ್ಟೇ ಅಲ್ಲ, ಅಪ್ರಾಪ್ತಳನ್ನು ಮುಂಬೈಗೆ ಕರೆದುಕೊಂಡು ಹೋಗಿ ನಿರ್ಮಾಣ ಹಂತದ ಕಟ್ಟದಲ್ಲಿ ಉಳಿದು ಅಲ್ಲಿಯೂ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಈ ಕುರಿತು ಚಂದ್ರಕಾಂತನ ವಿರುದ್ಧ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿರೋ ನ್ಯಾಯಾಲಯವು ಆರೋಪಿ ಚಂದ್ರಕಾಂತನಿಗೆ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಜನ್ಮಭೂಮಿಯಲ್ಲಿ ಸಿಗುತ್ತಾ ಅಪೂರ್ವ ಕಾಣಿಕೆ?