Select Your Language

Notifications

webdunia
webdunia
webdunia
webdunia

ಕೊರೊನಾವೈರಸ್ ನಿಂದ ದೂರವಿರಲು ಹೀಗೆ ಮಾಡಿ

ಕೊರೊನಾವೈರಸ್ ನಿಂದ ದೂರವಿರಲು ಹೀಗೆ ಮಾಡಿ
ಬೆಂಗಳೂರು , ಬುಧವಾರ, 4 ಮಾರ್ಚ್ 2020 (09:46 IST)
ಬೆಂಗಳೂರು: ಕೊರೊನಾವೈರಸ್ ಮಾರಕ ರೋಗ ಬೆಂಗಳೂರಿಗೂ ಕಾಲಿಟ್ಟಿದ್ದು ಸರ್ಕಾರದ ವತಿಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


ಅದಲ್ಲದೆ, ನಾವು ಜನ ಸಾಮಾನ್ಯರು ನಮಗೆ ಸಾಧ‍್ಯವಾದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಆದಷ್ಟು ಸುರಕ್ಷಿತವಾಗಿರಬಹುದು. ಅದಕ್ಕೆ ಏನು ಮಾಡಬೇಕು ಗೊತ್ತಾ?

  • ಸಾರ್ವಜನಿಕ ಸ್ಥಳಗಲ್ಲಿ ಓಡಾಡುವಾಗ ಸುರಕ್ಷಿತ ಮಾಸ್ಕ್ ಗಳನ್ನು ಧರಿಸಿ ಓಡಾಡುವುದು ಅತೀ ಮುಖ್ಯ. ನಿಮ್ಮ ಮಕ್ಕಳಿಗೂ ಶಾಲೆಗಳಿಗೆ ಹೋಗುವಾಗ ಮಾಸ್ಕ್ ನೀಡಿ.
  • ಹೊರಗಡೆ ಹೋಗಿ ಬಂದ ತಕ್ಷಣ, ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ಖರೀದಿಸಿ ತಕ್ಷಣ ಸೋಪು ನೀರು ಅಥವಾ ಆಲ್ಕೋಹಾಲ್ ಕಂಟೆಂಟ್ ಇರುವ ಹ್ಯಾಂಡ್ ವಾಶ್ ಬಳಸಿ ಕೈ ತೊಳೆದುಕೊಳ್ಳಿ.
  • ನಿಮ್ಮ ಸುತ್ತಮುತ್ತ ಸೀನುವ, ಕೆಮ್ಮುವ ವ್ಯಕ್ತಿಗಳಿದ್ದರೆ ಆದಷ್ಟುಅವರಿಂದ ದೂರವಿರಿ. ಹಾಗೆಯೇ ನೀವೂ ಸೀನುವಾಗ ಮತ್ತು ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಿ.
  • ಹಸಿ ಮಾಂಸ ಸೇವನೆ, ಸರಿಯಾಗಿ ತರಕಾರಿಗಳನ್ನು ತೊಳೆಯದೇ ಉಪಯೋಗಿಸಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ಮಾಡಿದ ತಪ್ಪಿಗೆ ಯುವತಿಗೆ ಸಾವಿನ ಶಿಕ್ಷೆ ನೀಡಿದ ಪೋಷಕರು