ಎಂಜಲು ತಾಕಿಸಿ ಪೇಜ್ ತಿರುವು ಹಾಕುವಂತಿಲ್ಲ! ಸರ್ಕಾರಿ ಅಧಿಕಾರಿಗಳಿಗೆ ಆದೇಶ

ಸೋಮವಾರ, 24 ಫೆಬ್ರವರಿ 2020 (10:25 IST)
ಲಕ್ನೋ: ಇನ್ನು ಮುಂದೆ ಎಂಜಲು ತಾಕಿಸಿ ಸರ್ಕಾರಿ ಕಚೇರಿಗಳಲ್ಲಿ ಪೇಜ್ ತಿರುವು ಹಾಕುವಂತಿಲ್ಲ! ಹೀಗಂತ ಉತ್ತರ ಪ್ರದೇಶ ಸರ್ಕಾರ ಅಧಿಕಾರಿಗಳಿಗೆ ಆದೇಶ ನೀಡಿದೆ.


ಇದೆಲ್ಲಾ ಸೋಂಕು ರೋಗ ಹರಡದಿರಲು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮ. ಉತ್ತರ ಪ್ರದೇಶದ ರಾಯ್ ಬರೇಲಿಯ ಅಧಿಕಾರಿಗಳಲ್ಲಿ ಅಲ್ಲಿನ ಸಿಒಡಿ ಅಭಿಷೇಕ್ ಗೋಯಲ್ ಇಂತಹದ್ದೊಂದು ಆದೇಶ ನೀಡಿದ್ದಾರೆ.

ಅಧಿಕಾರಿಗಳು ಫೈಲ್, ಕಾಗದ ಪತ್ರಗಳನ್ನು ತಿರುವಾಗ ಎಂಜಲು ಬಳಸುವುದು ಗಮನಿಸಿದ್ದೇನೆ. ಇದರ ಬದಲು ವಾಟರ್ ಸ್ಪಾಂಜ್ ಬಳಸಿ. ಇದರಿಂದ ಸಂಭಾವ್ಯ ಸೋಂಕು ರೋಗಗಳನ್ನು ತಡೆಗಟ್ಟಬಹುದು ಎಂದು ಸಿಒಡಿ ಆದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟಾರ್ ರವಿ ಪೂಜಾರಿ ಬೆಂಗಳೂರು ಪೊಲೀಸರ ವಶ