ಕೊರೊನಾವೈರಸ್ ಗೆ ಇದುವರೆಗೆ ಬಲಿಯಾದವರ ಸಂಖ್ಯೆಯೆಷ್ಟು ಗೊತ್ತಾ?

ಸೋಮವಾರ, 24 ಫೆಬ್ರವರಿ 2020 (09:48 IST)
ಬೀಜಿಂಗ್: ಮಾರಕ ಕೊರೊನಾವೈರಸ್ ಗೆ ಇದುವರೆಗೆ ಬಲಿಯಾದವರ ಸಂಖ್ಯೆ ದಾಖಲೆ ಪ್ರಮಾಣ ತಲುಪಿದೆ. ಇದುವರೆಗಾಗಿ ಸುಮಾರು 2500 ಕ್ಕೂ ಅಧಿಕ ಮಂದಿ ಚೀನಾದಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.


ಹೊಸದಾಗಿ 400 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟಾರೆ ವೈರಸ್ ಗೆ ತುತ್ತಾದವರ ಸಂಖ್ಯೆ 77 ಸಾವಿರ ಕ್ಕೂ ಅಧಿಕ ಎನ್ನಲಾಗಿದೆ.

ಸಾರ್ಸ್ ಇತರ ಮಾರಕ ರೋಗಗಳಿಂದ ಸಾವನ್ನಪ್ಪಿರುವ ಸಂಖ್ಯೆಯನ್ನೂ ಮೀರಿರುವ ಕೊರೊನಾವೈರಸ್ ಹೊಸ ದಾಖಲೆಯನ್ನೇ ಮಾಡಿದೆ. ಚೀನಾ ಹೊರತಾಗಿ ದ.ಕೊರಿಯಾದಲ್ಲಿ 763 ಮಂದಿ ವೈರಸ್ ಪ್ರಕರಣಗಳು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತನ್ನನ್ನು ಬಾಹುಬಲಿಗೆ ಹೋಲಿಸಿದ್ದಕ್ಕೆ ಅಮೇರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದೇನು ಗೊತ್ತಾ?