Publish Date: Sat, 02 Sep 2023 (15:20 IST)
Updated Date: Sat, 02 Sep 2023 (14:39 IST)
ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯ ಮಠದಲ್ಲಿ ಗುರುವಾರ ರಾಯರ ಪೂರ್ವಾರಾಧನೆ ನಡೆಯಿತು. ಬೆಳಗಿನ ಜಾವ ಸುಪ್ರಭಾತ, ಪಂಚಾಮೃತ ಅಭಿಷೇಕ, ಉತ್ಸವ ರಾಯರ ಪಾದಪೂಜೆ, ರಜತ ಸಿಂಹ ವಾಹನೋತ್ಸವ ಇತರೆ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆದವು. ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇಟ್ಟು ಮಠದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ರಾಯರಿಗೆ ಭಕ್ತಿ ಸೇವೆ ಸಲ್ಲಿಸಿದರು. ತಮಿಳುನಾಡು ಸರ್ಕಾರದ ನಿರ್ದೇಶನ ಮೇರೆಗೆ ಮುಜರಾಯಿ ಇಲಾಖೆ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಅಹೋಬಲ ನರಸಿಂಹ ಸ್ವಾಮಿ ದೇವಸ್ಥಾನದಿಂದ ರಾಯರಿಗೆ ಶೇಷವಸ್ತ್ರ ತೆಗೆದುಕೊಂಡು ಬಂದು ಅರ್ಪಣೆ ಮಾಡಿದರು.