Select Your Language

Notifications

webdunia
webdunia
webdunia
webdunia

ಮಂತ್ರಾಲಯ : ಭಕ್ತರಿಂದ ಕೋಟ್ಯಂತರ ಕಾಣಿಕೆ ಸಂಗ್ರಹ?

ಮಂತ್ರಾಲಯ : ಭಕ್ತರಿಂದ ಕೋಟ್ಯಂತರ ಕಾಣಿಕೆ ಸಂಗ್ರಹ?
ನವದೆಹಲಿ , ಗುರುವಾರ, 20 ಅಕ್ಟೋಬರ್ 2022 (12:55 IST)
ರಾಯಚೂರು : ಗುರುರಾಯರ ಸನ್ನಿಧಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
 
ಅಕ್ಟೋಬರ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಒಟ್ಟು 1,98,17,614 ರೂ. ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 4,40,660 ರೂ. ನಾಣ್ಯಗಳು ಹಾಗೂ 1,93,77,054 ರೂ. ನೋಟುಗಳಿವೆ. ಜೊತೆಗೆ 128 ಗ್ರಾಂ ಬಂಗಾರ, 810 ಗ್ರಾಂ ಬೆಳ್ಳಿಯಿದೆ.

ಇದು ಸೆ. 29 ರಿಂದ ಅ. 18ರವರೆಗಿನ 20 ದಿನಗಳ ಕಾಣಿಕೆ ಸಂಗ್ರವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ಧ್ವಂಸಕ್ಕೆ ಪಿಎಫ್ಐ ಸ್ಕೆಚ್!