ಮಳೆಗಾಗಿ ಪ್ರಾರ್ಥಿಸಿ ಮದುವೆ ಮಾಡಿದ್ರು…

Webdunia
ಶುಕ್ರವಾರ, 20 ಜುಲೈ 2018 (16:07 IST)
ರಾಜ್ಯದ ವಿವಿಧೆಡೆ ಮಳೆಯು ಸುರಿಯುತ್ತಿದೆ. ಹಲವೆಡೆ ಭಾರಿ ಅನಾಹುತ ಆಗುವಂತೆ ಮಳೆರಾಯ ತನ್ನ ಆರ್ಭಟ ತೋರುತ್ತಿದ್ದಾನೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆದರೆ ಆ ಜಿಲ್ಲೆಯಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಆ ಊರಿನ ಗ್ರಾಮಸ್ಥರು ಮದುವೆ ಮಾಡಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಮಾತ್ರ ಮಳೆಯ ಸಿಂಚನವಿಲ್ಲ. ಇದರಿಂದ ವರುಣದೇವ ಮುನಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆ ಎಂದು ನಂಬಿ ಕತ್ತೆಗಳಿಗೆ ಮೆರವಣಿಗೆ ಮಾಡಿದ್ದಾರೆ.

ಗ್ರಾಮದಲ್ಲಿ ಮಳೆ ಇಲ್ಲದ್ದರಿಂದ ರೈತರು ಪರಿತಪಿಸುವಂತಾಗಿದೆ. ಕೈ ಬಂದ ಫಸಲು ಸಹ ಮಳೆ ಇಲ್ಲದೆ ಒಣಗುತ್ತಿದೆ. ಆದಷ್ಟು ಬೇಗ ಮಳೆ ಬಂದರೆ ರೈತರಿಗೆ ಉಳಿಗಾಲ ಎನ್ನುವ ಮಾತು ಮಳೆಯನ್ನೆ ನಂಬಿರುವ ರೈತರದ್ದಾಗಿದೆ. ಹೀಗಾಗಿ ವರುಣ ದೇವನಿಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ಯಾಲೆಸ್ತೀನಿಯರ ಮೇಲಿರುವ ಅನುಕಂಪ ಬಾಂಗ್ಲಾದೇಶ ಹಿಂದೂಗಳ ಮೇಲೆ ಯಾಕಿಲ್ಲ: ನೆಟ್ಟಿಗರ ಆಕ್ರೋಶ

ಹಿಂದೂ ಮಹಿಳೆಯ ರೇಪ್ ಮಾಡಿ ಮರಕ್ಕೆ ಕಟ್ಟಿ ಕೂದಲು ಕತ್ತರಿಸಿದ ಬಾಂಗ್ಲಾದೇಶ ರಕ್ಕಸರು

ಕೇಂದ್ರದ ಮಾಜಿ ಸಚಿವ ಸುರೇಶ್ ಕಲ್ಮಾಡಿ ಇನ್ನಿಲ್ಲ

ವಿ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು: ಇದೇನು ಗೂಂಡಾ ಸಂಸ್ಕೃತಿ ಬಿಜೆಪಿ ಆಕ್ರೋಶ

ಮುಖ್ಯಮಂತ್ರಿಯಾಗಿ ಇಂದು ವಿಶಿಷ್ಠ ದಾಖಲೆ ಮಾಡಿದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments