ಬೆಂಗಳೂರು: ತನ್ನನ್ನು ಮೂರ್ಖ ಎಂದು ಕರೆದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಮಾಜಿ ಸಂಸದ ಪ್ರತಾಪ್ ಸಿಂಹ, 14 ಸೈಟ್ ನುಂಗಿದ ನೀವು ನನಗೆ ಹೇಳಲು ಬರುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ದಸರಾವನ್ನು ಬಾನು ಮುಷ್ತಾಕ್ ಉದ್ಘಾಟಿಸುವುದಕ್ಕೆವಿರೋಧ ವ್ಯಕ್ತಪಡಿಸಿದ ಪ್ರತಾಪ್ ಸಿಂಹರನ್ನು ಸಿಎಂ ಮೂರ್ಖ ಎಂದಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್, ಸಿದ್ದರಾಮಯ್ಯ ಸರ್ ಏನು ಬೇಕಾದರೂ ನನ್ನ ಕರೆಯಲಿ. ಅವರಿಗೂ ಸೋಷಿಯಲ್ ಮೀಡಿಯಯಾದಲ್ಲಿ ಏನೇನು ಕರೆಯುತ್ತಾರೆ ಎನ್ನುವುದನ್ನು ನೋಡಲಿ. ಅದನ್ನು ನೋಡಿದರೆ ಅವರು ಮುಖ ಮುಚ್ಚಿಕೊಂಡು ಓಡಾಡಬೇಕಾಗುತ್ತದೆ ಎಂದು ಹೇಳಿದರು.
ಹೈಕೋರ್ಟ್‌ನಲ್ಲಿ ತನ್ನ ಅರ್ಜಿ ವಜಾಗೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೋರ್ಟ್ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಜಾತ್ಯಾತೀತತೆಯ ಚೌಕಟ್ಟಿನ ಅಡಿಯಲ್ಲಿ ಪಿಐಎಲ್ (PIL) ವಜಾ ಆಗಿದೆ. ಅದೇ ವಾಕ್ ಸ್ವಾತಂತ್ರ‍್ಯ ಬಳಸಿಕೊಂಡು ಮಾತನಾಡುತ್ತಿದ್ದೇನೆ ಅಷ್ಟೇ ಎಂದರು.
ಮುಡಾದಲ್ಲಿ 14 ಸೈಟುಗಳನ್ನು ಪಡೆದಿದ್ದು ಹಗಲು ದರೋಡೆ ಆಗಿತ್ತು. ಇಂಥ ಹಗಲು ದರೋಡೆ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ವಜಾ ಮಾಡಲಾಯಿತು. ಇನ್ನೂ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೂಡಿದ ಸಮೀರ್ ಗೆ ಕೋರ್ಟ್ ಜಾಮೀನು ನೀಡಿದೆ.
ಮಹೇಶ್ ತಿಮರೋಡಿ ಕೂಡಾ ಆರಾಮವಾಗಿ ಓಡಾಡಿಕೊಂಡಿದ್ದಾನೆ ಎಂದರು.