Select Your Language

Notifications

webdunia
webdunia
webdunia
webdunia

ಕೋರ್ಟ್‌ನಲ್ಲಿ ಹಿನ್ನಡೆಯಾದ ಪ್ರತಾಪ್ ಸಿಂಹಗೆ ಗುಮ್ಮಿದ ಸಿಎಂ ಸಿದ್ದರಾಮಯ್ಯ

Siddaramai

Sampriya

ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2025 (16:31 IST)
ಬೆಂಗಳೂರು: ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಸಿಎಂ ಸಿದ್ದರಾಮಯ್ಯ ಮೂರ್ಖ ಎಂದು ಹೇಳಿದರು. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಧರ್ಮದ ಆಧಾರದ ಮೇಲೆ ರಾಜಕೀಯ ಮಾಡೋದು, ಸಾಹಿತಿ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಬಾರದು ಎನ್ನುವುದು. ಬೇರೆ ಧರ್ಮದವರು ಪೂಜೆ ಮಾಡಬಾರದು ಎನ್ನುವುದು ಅರ್ಥವಾಗದ ವಿಚಾರ ಎಂದರು. 

ಸಂವಿಧಾನದಲ್ಲೇ ಜಾತಿ, ಧರ್ಮ ಬಿಟ್ಟು ಸಮಾನತೆಯಲ್ಲಿ ಬಾಳಬೇಕೆಂಬುದು ಇದೆ. ಆದರೆ ಒಬ್ಬ ಮಾಜಿ ಲೋಕಸಭಾ ಸದಸ್ಯನಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ ಅಂದ್ರೆ ಅವನನ್ನು ಮೂರ್ಖ ಎಂದು ಕರೀಬೇಕಾ ಎಂದು ವ್ಯಂಗ್ಯ  ಮಾಡಿದರು. 

ಈ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹಗೆ ಕೌಂಟರ್ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರು ತಮ್ಮ ಮಕ್ಳ ಕೈಗೆ ದೊಣ್ಣೆ, ಲಾಂಗು ಕೊಟ್ಟು ಬೀದಿಗೆ ಬಿಡುತ್ತಾರಾ