Webdunia - Bharat's app for daily news and videos

Install App

ಮುಸ್ಲಿಂ ಮೀಸಲಾತಿ ಮಾಡಿ ಹಿಂದುಳಿದವರಿಗೆ ಭಾರೀ ಅನ್ಯಾಯ: ಪ್ರಲ್ಹಾದ್ ಜೋಶಿ

Krishnaveni K
ಗುರುವಾರ, 19 ಜೂನ್ 2025 (17:59 IST)
ಬೆಂಗಳೂರು: ವಸತಿ ಇಲಾಖೆಯ ವಿವಿಧ ಮನೆ ಹಂಚಿಕೆ ಯೋಜನೆಗಳಲ್ಲಿ ಶೇ 15ರಷ್ಟು ಮುಸಲ್ಮಾನರಿಗೆ ಹಂಚಿಕೆ ಮಾಡಲು ಮುಂದಾಗಿದೆ. ರಾಜ್ಯ ಸರಕಾರದ ಈ ನಿರ್ಧಾರದಿಂದ ಸಾಮಾನ್ಯ ಜನರು, ಎಸ್‍ಸಿ, ಎಸ್‍ಟಿ, ಒಬಿಸಿ ಜನರ ಮೀಸಲಾತಿಗೆ ಧಕ್ಕೆ ಆಗಲಿದೆ; ಇದು ಖಂಡನೀಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ವಸತಿ ಯೋಜನೆಗಳಡಿ ಮುಸ್ಲಿಮರಿಗೆ ಶೇ 15 ಮೀಸಲಾತಿ ನೀಡಿದೆ. ಯಾವುದೇ ಮಾದರಿಯ ಧರ್ಮಾಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದು ಸಂವಿಧಾನವಿರೋಧಿ ಎಂದೂ ತಿಳಿಸಿದೆ ಎಂದು ವಿವರಿಸಿದರು. ಇದೊಂದು ಅಸಾಂವಿಧಾನಿಕ, ಸಂವಿಧಾನವಿರೋಧಿ ತೀರ್ಮಾನ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ಮತ್ತು ಕಂಪೆನಿಯು ಗುತ್ತಿಗೆಯಲ್ಲಿ ಶೇ 4 ಮೀಸಲಾತಿ ನೀಡಲು ನಿರ್ಧರಿಸಿತ್ತು. ಇದು ದೇಶದಲ್ಲಿ ಎಲ್ಲೂ ಇಲ್ಲದ ದುಸ್ಸಾಹಸವಾಗಿತ್ತು. ಈಗ ವಸತಿ ಯೋಜನೆಗಳಡಿ ಶೇ 15ರಷ್ಟು ಮೀಸಲಾತಿ ನೀಡಲು ನಿರ್ಧಾರ ಮಾಡಿದೆ ಎಂದು ಆರೋಪಿಸಿದರು. ವಸತಿ ಯೋಜನೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಣ ಬರುತ್ತದೆ ಎಂದು ವಿವರಿಸಿದರು.

ಸರಕಾರವು ತುಷ್ಟೀಕರಣದ ರಾಜಕಾರಣದಲ್ಲಿ ಇತರ ಸಮುದಾಯಗಳಿಗೆ ಅನ್ಯಾಯ ಮಾಡಿ, ಸಂವಿಧಾನವಿರೋಧಿ, ಧರ್ಮಾಧಾರಿತ ಮೀಸಲಾತಿಯನ್ನು ಕೊಡುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಗತ್ಯ ವಿಷಯಗಳನ್ನು ಪರಿಶೀಲಿಸಿ ಕಾನೂನಿನ ಹೋರಾಟದ ಸಂಬಂಧ ಚಿಂತನೆ ಮಾಡುತ್ತೇವೆ ಎಂದು ಪ್ರಕಟಿಸಿದರು.
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ: ಬಾಕಿ ಹಣದ ಬಗ್ಗೆ ಬಿಗ್‌ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್‌

ಮುಸ್ಲಿಮರಿಗೆ ಮತ್ತೊಂದು ಮೀಸಲಾತಿ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರಿನ ಅಕ್ಷಯ್ ಕೊನೆಗೂ ಬದುಕುಳಿಯಲಿಲ್ಲ: ಅಜ್ಜ, ಅಜ್ಜಿಯ ಹೋಮವೂ ಫಲವಾಗಲಿಲ್ಲ

ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚರಿಸುವವರ ಗಮನಕ್ಕೆ: ಶನಿವಾರದವರೆಗೂ ರಾತ್ರಿ ಬಂದ್

Plane Crash: ಸ್ವಗೃಹಕ್ಕೆ ಮಂಗಳೂರು ಮೂಲದ ಕೋ ಪೈಲಟ್ ಕ್ಲೈವ್ ಕುಂದರ್ ಮೃತದೇಹ

ಮುಂದಿನ ಸುದ್ದಿ
Show comments