Webdunia - Bharat's app for daily news and videos

Install App

ಗೃಹಲಕ್ಷ್ಮಿ: ಬಾಕಿ ಹಣದ ಬಗ್ಗೆ ಬಿಗ್‌ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್‌

Sampriya
ಗುರುವಾರ, 19 ಜೂನ್ 2025 (16:47 IST)
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕಕರಣೆ ಮಾಡುವುದಿಲ್ಲ. ಈ ಹಿಂದೆಯಿದ್ದ ವ್ಯವಸ್ಥೆಯೇ ಮುಂದಿನ ದಿನಗಳಲ್ಲಿಯೂ ಮುಂದುವರೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಗೃಹಲಕ್ಷ್ಮಿ ಹಣ ವಿಳಂಬದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗೃಹಲಕ್ಷ್ಮಿ ಹಣ ಬಿಡುಗಡೆಗೆ ಯಾವುದೇ ತಾಂತ್ರಿಕ ಸಮಸ್ಯೆ ‌ಇಲ್ಲ. ಏಪ್ರಿಲ್ ತಿಂಗಳವರೆಗೂ ಹಣ ಕ್ಲಿಯರ್ ಆಗಿದೆ. ಮೇ ತಿಂಗಳು ಮಾತ್ರ ಬಾಕಿ ಇದ್ದು ಪ್ರತಿ‌ ತಿಂಗಳು ಹಣಕಾಸು ‌ಇಲಾಖೆಗೆ ಹಣ ಬಿಡುಗಡೆ ಆಗುತ್ತಿದೆ ಎಂದರು. 

ಈಗ ಹಣ ತಾಲೂಕು, ಜಿಲ್ಲಾ ಪಂಚಾಯತಿಗೆ ಸುತ್ತಾಡಿ ಬಿಡುಗಡೆ ಆಗಬೇಕಿದೆ. ಇದರಿಂದಾಗಿ ಒಂದು ವಾರ, ಎರಡು ವಾರ ತಡೆ ಆಗಬಹುದು ಅಷ್ಟೇ. ಬಾಕಿ ಹಣ ಬಿಡುಗಡೆ ಮಾಡುತ್ತೇವೆ  ಎಂದು ತಿಳಿಸಿದರು.

ಪ್ರತಿ ತಿಂಗಳು ಹಣಕಾಸು ‌ಇಲಾಖೆ ಹಣ ಬಿಡುಗಡೆ ಮಾಡುತ್ತಿದೆ. ಪ್ರತಿ ತಿಂಗಳು ಯಜಮಾನಿಯರು ಹೊಸದಾಗಿ ಸೇರುತ್ತಿದ್ದಾರೆ. ಈಗ 1.25 ಕೋಟಿ ಯಜಮಾನಿಯರು ಯೋಜನೆ ಅಡಿ ಇದ್ದಾರೆ. ನಮ್ಮ ಇಲಾಖೆಯಿಂದ ಫಲಾನುಭವಿಗಳ ಪರಿಷ್ಕರಣೆ ಮಾಡುವುದಿಲ್ಲ. ಈಗ ಹೇಗೆ ಇದೆಯೋ ಹಾಗೆಯೇ ಮುಂದುವರೆಯುತ್ತಿದೆ‌ ಅಂತ ಸ್ಪಷ್ಟಪಡಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾನುವಾರ ನಮ್ಮ ಮೆಟ್ರೋ ವ್ಯತ್ಯಯ: ಯಾವ ಮಾರ್ಗದಲ್ಲಿ ಮೆಟ್ರೊ ಇಲ್ಲ ಇಲ್ಲಿದೆ ವಿವರ

ವಿಮಾನವನ್ನು ಕ್ರ್ಯಾಶ್ ಮಾಡುವುದಾಗಿ ವಿಮಾನದೊಳಗೆ ಬೆಂಗಳೂರು ವೈದ್ಯೆ ಚೀರಾಟ, ಹೊರಕಳುಹಿಸಿದ ಕ್ಯಾಬಿನ್ ಸಿಬ್ಬಂದಿ

Video: ಅಂಬೇಡ್ಕರ್ ಫೋಟೋ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಲಾಲೂ ಪ್ರಸಾದ್: ಮೋದಿ ವಾಗ್ದಾಳಿ

ಬಿಜೆಪಿ ಪಕ್ಷದೊಳಗಿನ ಅತೃಪ್ತಿ ಬಗ್ಗೆ ಮಾತನಾಡಿದ ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments