Select Your Language

Notifications

webdunia
webdunia
webdunia
webdunia

ಪೆನ್‌ಡ್ರೈವ್ ಹಂಚಿಕೆ ಪ್ರಕರಣ: ಹಾಸನದ 18 ಕಡೆಗಳಲ್ಲಿ ಎಸ್‌ಐಟಿ ದಾಳಿ

Prajwal

Sampriya

ಹಾಸನ , ಬುಧವಾರ, 15 ಮೇ 2024 (14:11 IST)
ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್‌ಡ್ರೈವ್ ವಿಡಿಯೋ ವೈರಲ್ ಸಂಬಂಧ ಇಂದು ಎಸ್‌ಐಟಿ ಅಧಿಕಾರಿಗಳು ಹಾಸನದ 18ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಈ ಸಂಬಂಧ ಇಂದು ಬೆಳಗ್ಗಿನ ಜಾವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್‌ ರೇವಣ್ಣ ಮಾಜಿ ಕಾರುಚಾಲಕ ಕಾರ್ತಿಕ್, ಶಶಿ, ಚೇತನ್‌ಗೌಡ ನಿವಾಸದ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.

ದಾಳಿ ವೇಳೆ  ಶರತ್ ಅವರ ಐಫೋನ್ ವಶಕ್ಕೆ ಪಡೆದಿದ್ದಾರೆ.  ವಿವಿಧೆಡೆಯ ದಾಳಿಗಳಿಂದ ಎಸ್ಐಟಿ ತಂಡಗಳು ಮಹತ್ವದ ಸಾಕ್ಷ್ಯ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಹೊರಟಿವೆ.

ಇನ್ನೂ ಕಾಂಗ್ರೆಸ್‌ ಕಾರ್ಯಕರ್ತರ ಮೇಲೂ ದಾಳಿ:  ಇನ್ನೂ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಕಾಂಗ್ರೆಸ್ ಕಾರ್ಯಕರ್ತ, ಸಚಿವ ಜಮೀರ್ ಅಹಮದ್ ಅವರ ಆಪ್ತ ನವೀನ್‌ಗೌಡ ನಿವಾಸದ ಮೇಲೂ ಎಸ್ಐಟಿ‌ ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಒಕೆಯಲ್ಲಿ ಪಾಕಿಸ್ತಾನ ವಿರುದ್ಧ ಪಾಕಿಸ್ತಾನಿಯರು ಇದ್ದಕ್ಕಿದ್ದಂತೆ ತಿರುಗಿಬೀಳಲು ಕಾರಣಗಳು