Select Your Language

Notifications

webdunia
webdunia
webdunia
Saturday, 5 April 2025
webdunia

ಅಶ್ಲೀಲ ವಿಡಿಯೋ ಹಂಚಿಕೆ ಆರೋಪ: ಸಿ. ಪ್ರಜ್ವಲ್ ಅರೆಸ್ಟ್‌

Arrest

Sampriya

ಕಳಸ , ಶುಕ್ರವಾರ, 10 ಮೇ 2024 (19:08 IST)
ಕಳಸ: ಅಶ್ಲೀಲ ವಿಡಿಯೋ ಹಂಚಿಕೆ ಸಂಬಂಧ ಮೂಡಿಗೆರೆ ತಾಲ್ಲೂಕಿನ ಸಂಸೆ ಗ್ರಾಮದ  ಬಸರೀಕಲ್ಲು ಪ್ರದೇಶದ ಸಿ.ಪ್ರಜ್ವಲ್ (25) ಎಂಬಾತನನ್ನು ಕುದುರೆಮುಖ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲಿ 'ಟ್ರೋಲ್ ದುಶ್ಯಾಸನ' ಎಂಬ ಪೇಜ್‌ ಮತ್ತು ಚಾನಲ್ ಮೂಲಕ ನಗ್ನ ಮತ್ತು ಅರೆನಗ್ನ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ.

ಈ ಬಗ್ಗೆ ಬಂದ ಮಾಹಿತಿ ಆಧರಿಸಿ ಪೇಜ್‌ನ ಅಡ್ಮಿನ್ ಪ್ರಜ್ವಲ್‌ ವಿರುದ್ಧ ಐ.ಟಿ ಕಾಯ್ದೆ 67 ಮತ್ತು 67(ಎ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಕುದುರೆಮುಖ ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ಜತೆಗೆ ಮಹಿಳೆಯರ ಖಾಸಗಿತನ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯ ಸಾಲುಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರಪೇಟೆ: ಬಾಲಕಿಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಕೊನೆಗೆ ಮಾಡಿದ್ದೇನು ಗೊತ್ತಾ