Publish Date: Thu, 12 Jun 2025 (13:40 IST)
Updated Date: Thu, 12 Jun 2025 (13:42 IST)
ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಎಲ್ಲಾ ನನ್ನ ಲೆವೆಲ್ ಅಲ್ಲ. ಅವರ ಬಗ್ಗೆ ಎಲ್ಲಾ ನನ್ನ ಬಳಿ ಕೇಳಬೇಡಿ, ನನ್ನ ಲೆವೆಲ್ ಏನಿದ್ರೂ ಬೇರೆ ಎಂದಿದ್ದಾರೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್.
ಹಿಂದೂ ಕಾರ್ಯಕರ್ತ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರನ್ನು ಗಡೀಪಾರು ಮಾಡುವ ಬಗ್ಗೆ ಗೃಹ ಇಲಾಖೆ ಚಿಂತನೆ ನಡೆಸಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಮಾಧ್ಯಮಗಳು ಈ ಬಗ್ಗೆ ಇಂದು ಪ್ರದೀಪ್ ಈಶ್ವರ್ ಅವರನ್ನು ಪ್ರಶ್ನೆ ಮಾಡಿದೆ. ಸೂಲಿಬೆಲೆಯವರನ್ನು ಗಡೀಪಾರು ಮಾಡುವ ಚಿಂತನೆ ಸರ್ಕಾರದ ಮುಂದಿದೆಯೇ ಎಂದು ಪ್ರಶ್ನೆ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರದೀಪ್ ಈಶ್ವರ್ ಅವರ ಬಗ್ಗೆ ನಾನು ಮಾತನಾಡಲ್ಲ. ಯಾಕೆಂದರೆ ಅವರು ನನ್ನ ಲೆವೆಲ್ ನಲ್ಲಿ ಇಲ್ಲ. ನನ್ನ ಲೆವೆಲ್ ಏನಿದ್ದರೂ ಆರ್ ಅಶೋಕ್, ಬಿವೈ ವಿಜಯೇಂದ್ರ ಮಾತ್ರ. ಇವರ ಬಗ್ಗೆ ಕೇಳಿ ಮಾತನಾಡುತ್ತೇನೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ಎಲ್ಲಾ ನಮ್ಮ ಕಾರ್ಯಕರ್ತರು ಮಾತನಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಗಡೀಪಾರಿಗೆ ಗೃಹ ಇಲಾಖೆ ಸಿದ್ಧತೆ ನಡೆಸಿದೆ ಎಂಬ ಸುದ್ದಿಯಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಮಂಗಳೂರಿನಲ್ಲಿ ಕೋಮುಗಲಭೆಯಾದ ಬಳಿಕ ಕೆಲವು ಹಿಂದೂ ನಾಯಕರ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ.