Publish Date: Wed, 10 Jun 2026 (12:54 IST)
Updated Date: Wed, 10 Jun 2026 (12:58 IST)
ಬೆಂಗಳೂರು: ನಾನಾಗಿಯೇ ಯಾರ ಬಳಿಯೂ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಆದರೆ ಈ ಬಾರಿ ಯುವ ಕೋಟಾದಲ್ಲಿ ನನಗೇ ಸಚಿವ ಸ್ಥಾನ ಕೊಡಬಹುದು ಎಂದು ಎಲ್ಲರೂ ಹೇಳ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೊಂಡಿದ್ದಾರೆ.
ಸಚಿವ ಸಂಪುಟ ಎರಡನೇ ಲಿಸ್ಟ್ ಬಿಡುಗಡೆಗೆ ಮುನ್ನ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಇಂದು ದೆಹಲಿಗೆ ಸಿಎಂ ಡಿಕೆ ಶಿವಕುಮಾರ್ ತೆರಳಿದ್ದಾರೆ. ಇದರ ನಡುವೆ ಮಾಧ್ಯಮಗಳು ಪ್ರದೀಪ್ ಈಶ್ವರ್ ರನ್ನು ಮಾತನಾಡಿಸಿವೆ.
ಈ ವೇಳೆ ಪ್ರತಿಕ್ರಿಯಿಸಿದ ಅವರು ಈ ಬಾರಿ ಯುವ ಕೋಟಾದಲ್ಲಿ ಎರಡು ಸ್ಥಾನ ಕೊಡ್ತಾರಂತೆ ಸಾರ್. ಅದು ನನಗೇ ಇರಲಿ, ರವಿ ಗಾಣಿಗ ಇರಲಿ, ಶರತ್ ಬಚ್ಚೇಗೌಡ ಇರಲಿ ಯಾರಿಗಾನಾ ಕೊಡಲಿ. ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಈ ಬಾರಿ ಒಬಿಸಿ ಸಮುದಾಯದಿಂದ ಚಿಕ್ಕಬಳ್ಳಾಪುರಕ್ಕೆ ಒಂದು ಸ್ಥಾನ ಕೊಡಬಹುದು ಎಂದು ನಿರೀಕ್ಷೆಯಿದೆ.
ಸಚಿವ ಸ್ಥಾನ ಕೊಡಿ ಎಂದು ನಾನಾಗಿ ಯಾರ ಬಳಿಯೂ ಕೇಳಿಲ್ಲ. ಸಿಎಂ ಸಾಹೇಬ್ರ ಬಳಿ ನನಗೆ ಆಶೀರ್ವಾದ ಮಾಡಿ ಎಂದು ಕೇಳಿದ್ದೇನೆ. ಯುವ ಕೋಟಾದಲ್ಲಿ ನನಗೆ ಸಿಗಬಹುದು ಎಂದು ಹೇಳ್ತಿದ್ದಾರೆ. ನೋಡೋಣ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ