Publish Date: Wed, 10 Jun 2026 (11:05 IST)
Updated Date: Wed, 10 Jun 2026 (11:09 IST)
ಜೈಪುರ: ಬಟ್ಟೆ ಅಂಗಡಿಗೆ ಹೋಗಿ ಟ್ರಯಲ್ ರೂಂಗೆ ಹೋಗಿ ಡ್ರೆಸ್ ಸರಿಯಾಗಿದೆಯಾ ಎಂದು ಚೆಕ್ ಮಾಡುವವರು ಈ ವಿಡಿಯೋವನ್ನು ತಪ್ಪದೇ ನೋಡಬೇಕು.
ಬಟ್ಟೆ ಅಂಗಡಿಗಳು, ಮಾಲ್‌ಗಳು ಅಥವಾ ಹೋಟೆಲ್‌ಗಳ ಚೇಂಜಿಂಗ್ ರೂಮ್‌ಗಳನ್ನು ಬಳಸುವಾಗ ಸಣ್ಣ ನಿರ್ಲಕ್ಷ್ಯವೂ ಸಹ ನಮ್ಮ ಗೌರವ ಮತ್ತು ಗೌಪ್ಯತೆಗೆ ಧಕ್ಕೆ ತರಬಹುದು. ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾಗಳ ತಂತ್ರಜ್ಞಾನಗಳು ಅತಿ ಸೂಕ್ಷ್ಮವಾಗಿರುವುದರಿಂದ, ಜಾಗರೂಕರಾಗಿರುವುದು ಅತ್ಯಗತ್ಯ.
ಈ ವಿಡಿಯೋದಲ್ಲಿ ಕಾಣುತ್ತಿರುವ ಘಟನೆ ನಡೆದಿರುವುದು ರಾಜಸ್ತಾನದ ಬಟ್ಟೆ ಅಂಗಡಿಯೊಂದರಲ್ಲಿ. ನೋಡಲು ದೊಡ್ಡ ಬಟ್ಟೆ ಮಳಿಗೆ. ಆದರೆ ಒಳಗೆ ಟ್ರಯಲ್ ರೂಂನಲ್ಲಿ ಕಣ್ಣಿಗೆ ಸುಲಭವಾಗಿ ಕಾಣಿಸದಷ್ಟು ಚಿಕ್ಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಇದನ್ನು ಗಮನಿಸಿ ಯಾರೋ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾಗುವ ಪೊಲೀಸರು ಟ್ರಯಲ್ ರೂಂಗೆ ಬಂದು ನೋಡಿದಾಗ ಕ್ಯಾಮರಾ ಕಂಡುಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದು ಒಂದು ಅಂಗಡಿಯ ಪ್ರಕರಣವಲ್ಲ. ಹಲವು ಕಡೆ ಇಂತಹದ್ದೇ ಘಟನೆಗಳಾಗುತ್ತವೆ. ಕೆಲವೊಂದು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಹೀಗಾಗಿ ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಂನಲ್ಲಿ ಡ್ರೆಸ್ ಹಾಕುವ ಮೊದಲು ಸುತ್ತಲೂ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ