ಐಡಿಯಲ್ ಚಿಕನ್ ಸಿಬ್ಬಂದಿಗಳ ಮೇಲೆ ಇಬ್ಬರು ರೌಡಿಶೀಟರ್ಗಳು ಕಲ್ಲು, ಹೆಲ್ಮೆಟ್ನಿಂದ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ರೌಡಿಶೀಟರ್ ಪ್ರೀತಮ್ ಯಾನೆ ಮತ್ತು ಧೀರಜ್ ಕುಮಾರ್ ಪುಂಡಾಟ ಮೆರೆದಿದ್ದಾರೆ. ಈ ಹಿಂದೆಯೂ ಹಲವಾರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಿದ್ದರು ಮತ್ತು ಚಾಕು ತೋರಿಸಿ ಬೆದರಿಸುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಪೊಲೀಸರು ಇಬ್ಬರು ರೌಡಿಶೀಟರ್ಗಳನ್ನ ಬಂಧಿಸಿದ್ದಾರೆ. ಅಪರಾಧಿಗಳಿಂದ ಎರಡು ಚೂರಿ, ಹೆಲ್ಮೆಟ್ ವಶಕ್ಕೆ ಪಡೆದಿದ್ದಾರೆ. ರೌಡಿ ಶೀಟರ್ ಪ್ರೀತಮ್ 3 ಕೊಲೆ ಪ್ರಕರಣ ಸೇರಿ 10 ಕ್ಕೂ ಹೆಚ್ಚು ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ.