Select Your Language

Notifications

webdunia
webdunia
webdunia
webdunia

ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್
ಬೆಂಗಳೂರು , ಭಾನುವಾರ, 19 ಡಿಸೆಂಬರ್ 2021 (10:34 IST)
ಭಾನುವಾರದ ಬಾಡೂಟ ಮಾಡಲು ವಿವಿಧ ಭೋಜನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ಕೆಲವರಿಗೆ ಮನೆಯಲ್ಲಿ ನಾನ್ವೆಜ್ ತಿಂದಷ್ಟು ತೃಪ್ತಿ ಆಗುವುದಿಲ್ಲ.

ಹೀಗಾಗಿಯೇ ನಿಮ್ಮ ಭಾನುವಾರವನ್ನು ನಿಮಗ್ ಇಷ್ಟ ಬಂದ ರೀತಿಯಲ್ಲಿ ಅಡುಗೆ ಮಾಡಿಕೊಂಡು ತಿನ್ನಲು ಮನೆಯಲ್ಲಿಯೇ ವಿವಿಧ ಬಗೆಯ ಮಾಂಸಹಾರಿ ಅಡುಗೆಗಳನ್ನು ಮಾಡಿಕೊಳ್ಳಬಹುದು.

ಅದರಲ್ಲೂ ರೆಸ್ಟೋರೆಂಟ್ ಶೈಲಿಯ ಆಹಾರ ಪದಾರ್ಥ ಇಷ್ಟಪಡುವವರು ಕಡಾಯಿ ಚಿಕನ್ ಮಾಡಿಕೊಂಡು ಸೇವನೆ ಮಾಡಬಹುದು. ಕಡಾಯಿ ಚಿಕನ್ ಮಾಡುವ ವಿಧಾನ ಇಲ್ಲಿದೆ. ಕಡಾಯಿ ಚಿಕನ್ ಇದು ನೀವು ರೆಸ್ಟೋರೆಂಟ್ಗಳಿಗೆ ಹೋದಾಗ ಮೆನುವಿನಲ್ಲಿ ಕಾಣ ಸಿಗುವ ಒಂದು ಐಟಂ ಆಗಿದೆ.

ರೆಸ್ಟೋರೆಂಟ್ ರುಚಿಯಲ್ಲಿಯೇ ಕಡಾಯಿ ಚಿಕನ್ ಅನ್ನು ಮನೆಯಲ್ಲಿಯೂ ಮಾಡಬಹುದು.ಇನ್ನು ಈ ಕಡಾಯಿ ಚಿಕನ್ ಸೆಮಿ ಗ್ರೇವಿ ರೆಸಿಪಿಯಾಗಿದ್ದು ರೊಟ್ಟಿ/ನೀರುದೋಸೆ/ಅನ್ನ/ಚಪಾತಿಗೆ ಸೇರಿಸಿ ತಿನ್ನಲು ಸಖತ್ ಟೇಸ್ಟಿ ರೆಸಿಪಿಯಾಗಿದೆ. ಹಾಗಿದ್ರೆ ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಹೇಗೆ ಕಡಾಯಿ ಚಿಕನ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

 
*1 ಚಮಚ ಕಾಳು ಮೆಣಸು
*2 ಚಮಚ ಕೊತ್ತಂಬರಿ ಬೀಜ
*2 ಚಮಚ ಜೀರಿಗೆ
*3 ಚಮಚ ತುಪ್ಪ
*1 ಪಲಾವ್ ಎಲೆ
*4 ಈರುಳ್ಳಿ
*6 ಬೆಳ್ಳುಳ್ಳಿ ಎಸಳು
*ಸ್ವಲ್ಪ ಶುಂಠಿ
*1-2 ಮೆಣಸಿನ ಕಾಯಿ
*1 ಚಮಚ ಖಾರದ ಪುಡಿ
*1 ಚಮಚ ಖಾರದ ಪುಡಿ
*1 ಚಮಚ ಅರಿಶಿಣ ಪುಡಿ
*1/2 ಕೆಜಿ ಚಿಕನ್
*3 ಟೊಮೆಟೊ
*1 ಕ್ಯಾಪ್ಸಿಕಂ
*ಉಪ್ಪು
*ಮಾವಿನ ಕಾಯಿ ಪುಡಿ
ಮಾಡುವ ವಿಧಾನ
ಮೊದಲಿಗೆ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಹುರಿಯಿರಿ. ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಈಗ ಪ್ಯಾನ್ಗೆ ತುಪ್ಪ ಹಾಕಿ ಹಾಕಿ ಬಿಸಿ ಮಾಡಿ, ನಂತರ ಪಲಾವ್ ಎಲೆ ಹಾಕಿ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವಷ್ಟು ಹೊತ್ತು ಫ್ರೈ ಮಾಡಿ.ಕತ್ತರಿಸಿದ ಒಣ ಮಾವಿನಕಾಯಿ ಪುಡಿ, ಗರಂ ಮಸಾಲ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

ನಂತರ ಶುಂಠಿ, ಬೆಳ್ಳುಳ್ಳಿ ಜಜ್ಜಿ ಹಾಕಿ 2 ಸೆಕೆಂಡ್ ಸೌಟ್ನಿಂದ ಆಡಿಸಿ. ನಂತರ ತರಿತರಿಯಾಗಿ ರುಬ್ಬಿದ ಮಸಾಲೆ ಹಾಕಿ.ನಂತರ ಚಿಕನ್ ಹಾಕಿ ಮಿಕ್ಸ್ ಮಾಡಿ. ಬಳಿಕ ಚಿಕನ್ ಮಸಾಲೆ ಜೊತೆ ಮಿಕ್ಸ್ ಆದ ಮೇಲೆ ಟೊಮೆಟೊ ಪೇಸ್ಟ್, ಕ್ಯಾಪ್ಸಿಕಂ ಹಾಕಿ 2-3 ನಿಮಿಷ ಸೌಟ್ನಿಂದ ಆಡಿಸುತ್ತಾ ಇರಿ.

ನಂತರ ಅರಿಶಿಣ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಜೊತಗೆ ತಾಜಾ ತೆಂಗಿನಕಾಯಿ ಹಾಲು ಹಾಕಿ ಮಿಕ್ಸ್ ಮಾಡಿ 25-30 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಹೀಗೆ ಬೇಯಿಸುವಾಗ ಆಗಾಗ ತಿರುಗಿಸುತ್ತಾ ಇರಿ. ಹೀಗೆ ಮಾಡಿದ್ರೆ ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್ ಬಿಸಿ ಬಿಸಿ ಅನ್ನ, ರೊಟ್ಟಿ, ಚಪಾತಿ, ನೀರ್ ದೋಸೆ,  ದೋಸೆ ಜೊತೆಗೆ ಸವಿಯಲು ಸಿದ್ದ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಆಕ್ಟೀವ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ