Publish Date: Wed, 26 Jan 2022 (14:11 IST)
Updated Date: Wed, 26 Jan 2022 (17:47 IST)
ಪ್ಯಾಂಟ್, ಷರ್ಟ್ ಧರಿಸಿ ಕಾರಿನಲ್ಲಿ ಬರುವ ಯುವತಿಯೊಬ್ಬಳು ಮನೆಯ ಎದುರಿಗಿರುವ ಕುಂಡಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಜಯ ನಗರ ಠಾಣೆಯ ಆರ್‌ಎಂವಿ ಎರಡನೇ ಸ್ಟೇಜ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆಯ ಎದುರಿಗಿರುವ ಕುಂಡಗಳು ಬೆಳಗಾಗುವುದರೊಳಗೆ ಕಾಣೆಯಾಗುತ್ತಿದ್ದವು. ಮೊನ್ನೆ ಕೂಡ ಕಾವ್ಯ ಸೆಲ್ವಂ ಎನ್ನುವವರು ಮನೆಯಲ್ಲಿ ಹೀಗೆಯೇ ಆಗಿದೆ. ನಂತರ ಈ ಕಳ್ಳತನ ಮಾಡಿರುವವರು ಯಾರು ಎಂದು ನೋಡುವ ಸಲುವಾಗಿ ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ಆ ಸಿಸಿಟಿವಿಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಯುವತಿಯೊಬ್ಬಳು ಹೂವಿನ ಕುಂಡಗಳನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ.
ಅವರು ಸಿಸಿಟಿವಿಯ ದೃಶ್ಯಾವಳಿಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಡಿದ್ದರು. ಯುವತಿ ಕಳ್ಳತನ ಮಾಡುವ ಉದ್ದೇಶದಿಂದ ಕಾರನ್ನು ರಸ್ತೆಯ ಮಧ್ಯದಲ್ಲಿ ತಂದು ನಿಲ್ಲಿಸಿದ್ದಳು. ಕಾರಿನಲ್ಲಿ ಡ್ರೈವರ್ ಇದ್ದಾನೆ. ಈ ಯುವತಿ ಅತ್ತ ಇತ್ತ ನೋಡುತ್ತಾ ಕಳ್ಳರಂತೆ ಬಂದು ಎರಡು ಹೂಕುಂಡಗಳನ್ನು ಕದ್ದು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡಿದ್ದಾಳೆ. ಇವಿಷ್ಟೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ ಕಾವ್ಯಾ ಅವರು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ತನಿಖೆ ನಡೆಸಲು ಹೇಳಿದ್ದರು. ನಂತರ ಕಾರಿನ ನಂಬರನ್ನೂ ಕೂಡ ಅದರಲ್ಲಿ ಹಾಕಿದ್ದರು. ಆದರೆ ಸದ್ಯ ಟ್ವಿಟರ್ ಖಾತೆಯಲ್ಲಿನ ಈ ವಿಡಿಯೋ ಡಿಲೀಟ್ ಆಗಿದ್ದು, ಕಾರಣ ತಿಳಿದಿಲ್ಲ.