ಬೆಂಗಳೂರು ಗ್ರಾಮಾಂತರ ಇದ್ದಿದ್ರೆ ಚೆನ್ನಾಗಿ ಇತ್ತು. ನಾನು ಜನರಿಂದ ಗೆದ್ದು ಬಂದಿಲ್ಲ. ಪರಿಷತ್ಗೆ ಎಂಎಲ್ಸಿ ಆಗಿ ಆಯ್ಕೆಯಾಗಿ ಬಂದದ್ದು. ಮುಂದಿನ ಚುನಾವಣೆಗಾಗಿ ನಾನು ಅಲ್ಲೇ ಇದ್ದು ಕೆಲಸ ಮಾಡಿದ್ರೆ ಚೆನ್ನಾಗಿ ಇತ್ತು. ನನ್ನ ಮನಸ್ಸಿನಲ್ಲಿ ಇದ್ದದ್ದು ನಾನು ಸಿಎಂ ಬಳಿ ಹೇಳಿದ್ದೇನೆ..
ಪಾರ್ಟಿ ಬಿಟ್ಟು ಮನೆಗೆ ಹೋಗ್ತಿನಿ. ಆದರೆ, ಬೇರೆ ಪಾರ್ಟಿಗೆ ಹೋಗಲ್ಲ. ಇದೇ ಪಕ್ಷದಲ್ಲೇ ಇದ್ದು, ಜನರ ಸೇವೆ ಮಾಡುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.
ಮತ್ತೆ ಬೇರೆ ಪಾರ್ಟಿ ಸೇರೋದಿಲ್ಲ ಅಂತಾ ಸ್ಪಷ್ಟನೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರು..
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲವರು ಕಾಂಗ್ರೆಸ್‌ಗೆ ಹೋಗ್ತಾರೆ ಅನ್ನೋ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರಿಗೆ ಮಾಹಿತಿ ಇದ್ರೂ ಇರಬಹುದು. ನನಗೆ ಗೊತ್ತಿಲ್ಲ. ಪಾರ್ಟಿ ಬಿಟ್ಟು ಮನೆಗೆ ಹೋಗ್ತಿನಿ.
ಆದರೆ, ಬೇರೆ ಪಾರ್ಟಿಗೆ ಹೋಗಲ್ಲ. ನಾನು ಯಾವ ದೇವರ ಮೇಲೆ ಆದರೂ ಪ್ರಮಾಣ ಮಾಡುತ್ತೇನೆ. ಈವರೆಗೂ ನಾನು ಕಾಂಗ್ರೆಸ್ನ ಯಾವುದೇ ನಾಯಕರ ಜೊತೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಮಾಡಿದ್ದೇನೆ. ಸಿದ್ದರಾಮಯ್ಯ ನಿನ್ನೆ ಬಾದಾಮಿಯಿಂದ ಕರೆ ಮಾಡಿದ್ರು. ಅಧಿಕಾರಿಗಳ ನೇಮಕ ಸಂಬಂಧ ಚರ್ಚೆ ಮಾಡಿದ್ರು. ಹಾಗಂತಾ, ಬೇರೆ ಯಾವುದೇ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು, ವರಿಷ್ಠರ ತೀರ್ಮಾನಕ್ಕೆ ನನ್ನ ಸಹಮತ ಇದೆ. ಇಷ್ಟು ದಿನ ಬೆಂಗಳೂರು ಗ್ರಾಮಾಂತರ ಇತ್ತು. ಈಗ ಚಿಕ್ಕಬಳ್ಳಾಪುರ ನೀಡಿದ್ದಾರೆ. ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ನೀಡಿದ್ದಾರೆ. ಯಾಕೆ ಬದಲಾವಣೆ ಮಾಡಿದ್ದಾರೆ ಅಂತಾ ಕಾರಣಗಳು ನನಗೂ ಗೊತ್ತಿಲ್ಲ ಎಂದು ತಿಳಿಸಿದರು.