Select Your Language

Notifications

webdunia
webdunia
webdunia
webdunia

ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಮಣ್ಣಿನ ಮಡಿಕೆಗೆ ಶಿಫ್ಟ್..!

ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಮಣ್ಣಿನ ಮಡಿಕೆಗೆ ಶಿಫ್ಟ್..!
bangalore , ಬುಧವಾರ, 23 ಮಾರ್ಚ್ 2022 (19:35 IST)
ಬೇಸಿಗೆ ಬಿಸಿ ಗಣನೀಯ ಏರಿಕೆ ಕಾಣ್ತಿದೆ. ಸಮ್ಮರ್ ಶುರುವಾಗಿ ಬೆರೆಳೆಣಿಕೆ ದಿನಗಳು ಕಳೆಯೋದ್ರೊಳಗೆ ಸೂರ್ಯನ ಶಾಖ ಹೆಚ್ತಿದೆ. ಬೇಸಿಗೆಯಿಂದ ಬಚಾಬಾಗೋಕೆ ಜಂಕ್ ಫುಡ್ ಗೆ ಬಾಯ್ ಬಾಯ್ ಹೇಳಿರೊ ಮಂದಿ ಎಳನೀರು, ಹಣ್ಣು ಅಂತೆಲ್ಲಾ ಒಳ್ಳೆ ಹ್ಯಾಬಿಟ್ಸ್ ಶುರುಹಚ್ಕೊಂಡಿದ್ದಾರೆ, ಜೊತೆಗೆ ಮಣ್ಣಿನ ಮಡಿಕೆ ನೀರು ಕುಡಿತಿದ್ದಾರೆ‌.ಬೇಸಿಗೆ ಬಿಸಿಲಿಗೆ ಟಕ್ಕರ್ ಕೊಡಲು ನಮ್‌ ಮಂದಿ ಎಲ್ಲಾ ಟಿಪ್ಸ್ ಅಂಡ್ ಟ್ರಿಕ್ಸ್ ಫಾಲೋ ಮಾಡ್ತಿದ್ದಾರೆ. ಅದ್ರಲ್ಲೂ ಎಂತಾ ಬಿಸಿಲಲ್ಲು ನೀರನ್ನ ತಣ್ಣಗಿರಿಸೊ ಮಣ್ಣಿನ ಮಡಿಕೆಗಳಿಗೆ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಮಾರ್ಕೆಟ್ ನಲ್ಲಿ ಸ್ಟೀಲ್, ಪ್ಲಾಸ್ಟಿಕ್ ನ ಭಿನ್ನ, ವಿಭಿನ್ನ ಡಿಸೈನ್ ನ ನೀರು ಸಂಗ್ರಹಿಸುವ ಕಂಟೇನರ್ ಗಳಿದ್ರು ಜನಕ್ಕೆ ಇಷ್ಟವಾಗ್ತಿರೋದು ಮಣ್ಣಿನ ಮಡಿಕೆ. ಹಳೆ ಕಾಲದ ಮಡಿಕೆಯಿಂದ ಹಿಡಿದು ಮಾರ್ಡನ್ ಕಾಲದ ಎಲ್ಲಾ ರೀತಿಯ ಮಡಿಕೆಗಳು ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ‌‌. ಕೇವಲ ಮಡಿಕೆ ಮಾತ್ರವಲ್ಲ ಕಾಫಿ ಮಗ್, ವಾಟರ್ ಮಗ್, ಸಣ್ಣ ಲೋಟಗಳು, ಪ್ಲೇಟ್ಸ್, ವಾಟರ್ ಬಾಟಲ್, ಅಲಂಕಾರಿಕ ವಸ್ತುಗಳಿಗು ಸಹ ಸಖತ್ ಡಿಮ್ಯಾಂಡ್ ಶುರುವಾಗಿದ್ಯಂತೆ. ಕಳೆದ ವರ್ಷ ಇನ್ನೇನು ಒಳ್ಳೆ ವ್ಯಾಪಾರ ಶುರುವಾಗತ್ತೆ ಅಂತಿರುವಾಗಲೆ ಲಾಕ್ ಡೌನ್ ಆಯ್ತು ಬಿಜ಼ಿನೆಸ್ ಪಾತಾಳಕ್ಕೆ ಕುಸಿಯಿತು. ಆದ್ರೆ ಈ ವರ್ಷ ಒಳ್ಳೆ ವ್ಯಾಪಾರವಾಗ್ತಿದ್ದು ಇನ್ನು ಹೆಚ್ಚಿನ ನಿರೀಕ್ಷೆಯಿದೆ ಅಂತಾ ಮಡಿಕೆ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸ್ತಿದ್ದಾರೆ. ಬೇಸಿಗೆಯಿಂದ ಸಿಟಿ ಮಂದಿ ಮಣ್ಣಿನ ಮಡಿಕೆಗಳತ್ತ ವಾಲುತ್ತಿರುವುದು ಉತ್ತಮ ಬೆಳವಣಿಗೆ. ಇದ್ರಿಂದ ವಿಷಪೂರಿತ ಪ್ಲಾಸ್ಟಿಕ್ ಹಾಗೂ ಲೋಹದ ಉತ್ಪಾದನೆ ಕಮ್ಮಿಯಾಗಿ ಪ್ರಕೃತಿಗು ಒಳ್ಳೆಯದಾಗತ್ತೆ‌. ಜೊತೆಗೆ ಸಣ್ಣ ಉದ್ದಿಮೆದಾರರಿಗು ಪ್ರೋತ್ಸಾಹ ಸಿಗುತ್ತದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್. ಎಸ್. ಆರ್. ನಿವಾಸಿಗಳ ನಿತ್ಯ ಕಿರಿಕಿರಿ