Publish Date: Tue, 07 Mar 2023 (18:18 IST)
Updated Date: Tue, 07 Mar 2023 (18:21 IST)
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮತ್ತೊಂದು ಶಾಕ್ ಎದುರಾಗಿದೆ. PC ಆ್ಯಕ್ಟ್ ಕೇಸ್ ನಂತರ DA ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗುವ ಸಾಧ್ಯತೆಯಿದೆ. ಆದಾಯ ಮೀರಿ ಆಸ್ತಿ ಗಳಿಕೆಯಡಿ ಮತ್ತೊಂದು FIR ದಾಖಲಾಗಿದೆ. ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ 8 ಕೋಟಿ ಕ್ಯಾಶ್ ಪತ್ತೆಯಾಗಿದೆ. ಲೋಕಾಯುಕ್ತ ಟೀಮ್ ಕೆಜಿಗಟ್ಟಲೆ ಚಿನ್ನ ಪತ್ತೆ ಮಾಡಿದ್ದು, ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಈಗಾಗ್ಲೇ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮಾಡಾಳ್ ಮೇಲೆ ಕೇಸ್ ಆಗಿದ್ದು, ಲೋಕಾಯುಕ್ತ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಹಣ, ಚಿನ್ನ ಹಾಗೂ ಆಸ್ತಿಯ ಮೂಲದ ಬಗ್ಗೆ ರಿಪೋರ್ಟ್ ತಯಾರಾಗಿದ್ದು, ರಿಪೋರ್ಟ್ ರೆಡಿಯಾದ ಕೂಡಲೇ DA ಆ್ಯಕ್ಟ್ನಡಿ ಮತ್ತೊಂದು ಕೇಸ್ ದಾಖಲಾಗಿದೆ. ಪತ್ತೆಯಾದ ಹಣ, ಚಿನ್ನ ದಾಖಲೆ ಬಗ್ಗೆ ಲೋಕಾಯುಕ್ತಕ್ಕೆ ವರದಿ ಸಲ್ಲಿಕೆಯಾಗಿದೆ. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ A-1 ಆರೋಪಿಯಾಗಿದ್ದಾರೆ. ವಿರೂಪಾಕ್ಷಪ್ಪ ಪರ ಸುಪ್ರೀಂ ಕೋರ್ಟ್ ವಕೀಲ ಸಂದೀಪ್ ಪಾಟೀಲ್ ವಾದ ಮಾಡಲಿದ್ದಾರೆ. ಲೋಕಾಯುಕ್ತ ಪರ SPP ಬಿ.ಬಿ ಪಾಟೀಲ್ ಪ್ರತಿವಾದ ನಡೆಸಲಿದ್ದಾರೆ.
geetha
Publish Date: Tue, 07 Mar 2023 (18:18 IST)
Updated Date: Tue, 07 Mar 2023 (18:21 IST)