Webdunia - Bharat's app for daily news and videos

Install App

ಗಾನವಿ ಲಕ್ಷ್ಮಣ್‌ ಅಭಿನಯದ "ಭಾವಚಿತ್ರ" ಓಟಿಟಿಯಲ್ಲಿ ರಿಲೀಸ್‌

Webdunia
ಗುರುವಾರ, 5 ಮೇ 2022 (20:39 IST)
ಬೆಂಗಳೂರು: ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಗಾನವಿ ಲಕ್ಷ್ಮಣ್ ಅಭಿನಯದ "ಭಾವಚಿತ್ರ" ಸಿನಿಮಾ ಇದೇ ಮೇ ೬ ರಂದು ವೂಟ್‌ಸೆಲೆಟ್‌ ಓಟಿಟಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
 
ಗಿರೀಶ್‌ ಕುಮಾರ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಭಾವಚಿತ್ರ’ ಸಿನಿಮಾದಲ್ಲಿ ಜಾನಕಿ ಸೀರಿಯಲ್ ಹಾಗೂ ಹೀರೋ ಸಿನಿಮಾ ಖ್ಯಾತಿಯಾ ಗಾನವಿ ಲಕ್ಷ್ಮಣ್‌ ನಟಿಯಾಗಿ ಹಾಗೂ ಚಕ್ರವರ್ತಿ ನಟನಾಗಿ ಅಭಿನಯಿಸಿದ್ದಾರೆ. 
 
ಈ ಸಿನಿಮಾದ ಕಥಾವಸ್ತು ಫೋಟೊ ಮತ್ತು ಫೋಟೊಗ್ರಫಿ. ಈ ಚಿತ್ರದಲ್ಲಿ ನಟ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾನೆ. ಕೆಲ ಕಾರಣದಿಂದ ನಟಿಯೊಂದಿಗೆ ಜಗಳ ಮಾಡಿಕೊಂಡು ಸೋಲೋ ಟ್ರಿಪ್‌ ಹೋಗುವ ಹೀರೋ, ಕೆಲ ಬೆಳವಣಿಗೆಯಿಂದ ತನ್ನ ಕ್ಯಾಮರಾ ಮೂಲಕ ಚಿತ್ರಗಳು ಸೆರೆಯಾಗುತ್ತವೆ. ನಂತರ ಒಂದು ವಿಚಿತ್ರ ಕುಗ್ರಾಮಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ನಡೆಯುವ ಬೆಳವಣಿಗೆಯೇ ಇಡೀ ಚಿತ್ರ ಕುತೂಹಲವನ್ನು ಹಿಡಿದಿಟ್ಟುಕೊಳ್ಳಲಿದೆ. 
 
ಈ ಕುರಿತು ಮಾತನಾಡಿದ ನಟ ಚಕ್ರವರ್ತಿ ರೆಡ್ಡಿ, 
ನನಗೆ ಥ್ರಿಲ್ಲರ್‌ ಚಿತ್ರವೆಂದರೆ ಹೆಚ್ಚು ಪ್ರೀತಿ. ನನಗೇ ಇಂಥ ಪಾತ್ರ ಸಿಕ್ಕಾಗ ಅದನ್ನು ನಿರಾಕರಿಸುವ ಮಾತೇ ಇಲ್ಲ. ಇದು ಕೇವಲ ಥ್ರಿಲರ್‌ ಚಿತ್ರ ಮಾತ್ರವಲ್ಲ, ಮಿಸ್ಟರಿ ಕೂಡಿದ ಥ್ರಿಲ್ಲರ್‌ ಚಿತ್ರ. ಈ ಚಿತ್ರ ಖಂಡಿತ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುತ್ತದೆ ಎಂದರು.
 
ನಟಿ ಗಾನವಿ ಲಕ್ಷ್ಮಣ್‌ ಮಾತನಾಡಿ, ಈ ಸಿನಿಮಾದಲ್ಲಿ ಚಿತ್ರ ಎನ್ನುವ ಹೆಸರಿನಲ್ಲಿ ನಟಿಸಿದ್ದೇನೆ. ಇಂತಹ ಚಿತ್ರದಲ್ಲಿ ನಟಿಸುವ ಹಂಬಲವಿತ್ತು. ಅದನ್ನು ನಿರ್ದೇಶಕರು ಪೂರ್ತಿ ಮಾಡಿದ್ದಾರೆ. ಇದೀಗ ಈ ಸಿನಿಮಾ ಎಲ್ಲರ ಮನೆಗಳಲ್ಲೂ ಮೂಡಿ ಬರುತ್ತಿದೆ. ವೂಟ್‌ ಸೆಲೆಕ್ಟ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲಿದೆ ಎಂದರು.
 
ನಿರ್ದೇಶಕ ಗಿರೀಶ್‌ ಕುಮಾರ್‌ ಮಾತನಾಡಿ, ಥ್ರಿಲ್ಲರ್‌ ಚಿತ್ರದ ಕತೆ ಬರೆಯುವುದು ಅತ್ಯಂತ ಕ್ಲಿಷ್ಟಕರ. ಜನರಿಗೆ ಇಷ್ವಾಗುವ ಹಾಗೂ ಅವರಲ್ಲಿ ಆಸಕ್ತಿಯನ್ನು ಕಟ್ಟಿಕೊಡುವ ರೀತಿಯಲ್ಲಿ ಬರೆಯಬೇಕು. ಈ ಸಿನಿಮಾ ಜನರಿಗೆ ಇಷ್ಟವಾಗಿದೆ. ಈಗ ಪ್ರತಿಯೊಬ್ಬರೂ ಮನೆಯಲ್ಲಿಯೇ ವೂಟ್‌ನಲ್ಲಿ ನೋಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments