ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತಿದೆ. ಇದರೊಂದಿಗೆ ದೇಹದ ತೂಕವೂ ಹೆಚ್ಚಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ರೆ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 8 ತಿಂಗಳಲ್ಲಿ ಬರೋಬ್ಬರಿ 46 Kg ತೂಕ ಇಳಿಸಿಕೊಂಡು ಇಲಾಖೆಯಲ್ಲಿ ಭಾರೀ ಪ್ರಶಂಸೆ ಪಡೆದಿದ್ದಾರೆ. 130 Kg ತೂಕವಿದ್ದ ಮೆಟ್ರೋ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮಣಿ, ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಆದ್ರೆ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜೀತೆಂದ್ರ ಮಣಿ ಸಂಪೂರ್ಣ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರತಿದಿನ 15 ಸಾವಿರ ಹೆಜ್ಜೆ ನಡೆಯುವ ಜೊತೆಗೆ, ಪೌಷ್ಠಿಕ ಆಹಾರ ಸೇವನೆ ಮಾಡುವ ಕ್ರಮವನ್ನ ರೂಢಿಸಿಕೊಂಡಿದ್ದಾರೆ. ಜಂಕ್ ಫುಡ್‌ಗಳನ್ನ ಬದಿಗಿಟ್ಟು ರೊಟ್ಟಿ, ಸೂಪ್, ಸಲಾಡ್ ಹಾಗೂ ಹಣ್ಣುಗಳ ಆಹಾರ ಸೇವನೆಗೆ ತನ್ನನ್ನು ಒಗ್ಗಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಆಹಾರಕ್ರಮ ಅನುಸರಿಸಿ, ಕೇವಲ 8 ತಿಂಗಳಲ್ಲಿ ಬರೋಬ್ಬರಿ 46 Kg ತೂಕ ಇಳಿಸಿಕೊಂಡಿದ್ದಾರೆ. ಸೊಂಟದ ಭಾಗದಲ್ಲಿ ಕನಿಷ್ಠ 12 ಇಂಚು ಕರಗಿಸಿ, ಸದೃಢ ದೇಹ ಬೆಳೆಸಿಕೊಂಡಿದ್ದಾರೆ.