Select Your Language

Notifications

webdunia
webdunia
webdunia
webdunia

ಮೋದಿ ಆಗಮನಕ್ಕೆ ಮಧ್ಯರಾತ್ರಿಯಿಂದಲೇ ಪೊಲೀಸ್ರ ಸರ್ಪಗಾವಲು

ಮೋದಿ ಆಗಮನಕ್ಕೆ ಮಧ್ಯರಾತ್ರಿಯಿಂದಲೇ  ಪೊಲೀಸ್ರ ಸರ್ಪಗಾವಲು
bangalore , ಶುಕ್ರವಾರ, 25 ಆಗಸ್ಟ್ 2023 (17:51 IST)
ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಗೆ ಎಂಟ್ರಿ ಕೊಡ್ತಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ಸಿಟಿಗೆ ಆಗಮಿಸಲಿದ್ದು ಈ ಹಿನ್ನೆಲೆ ಮಧ್ಯರಾತ್ರಿ 2 ಗಂಟೆಯಿಂದಲೇ ನಗರದಲ್ಲಿ ಪೊಲೀಸ್ರು ಬಂದೋಬಸ್ತ್ ಮಾಡಿಕೊಳ್ಳಲ್ಲಿದ್ದಾರೆ.
 
ಹೆಚ್ ಎಎಲ್ ನಿಂದ ಪೀಣ್ಯದ ಇಸ್ರೋ ಕಚೇರಿವರೆಗೂ ಪೊಲೀಸ್ರು ಹದ್ದಿನಕಣ್ಣಿಡಲಿದ್ದಾರೆ. ಕಮಿಷನರ್ ಬಿ.ದಯಾನಂದ್ ನೇತೃತ್ವದಲ್ಲಿ  ಹೆಚ್ಚುವರಿ ಆಯುಕ್ತರಾದ ರಮನ್ ಗುಪ್ತಾ ಹಾಗೂ ಸತೀಶ್ ಕುಮಾರ್  ಸೇರಿ ಎಲ್ಲಾ ಡಿಸಿಪಿಗಳು ಮೇಲ್ವಿಚಾರಣೆ ವಹಿಸಲಿದ್ದಾರೆ. 50 ಎಸಿಪಿ, 100 ಕ್ಕೂ ಹೆಚ್ಚು ಇನ್ಸ್ಪೆಕ್ಟರ್, 1500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇದ್ರಲ್ಲ ಸಂಚಾರ ಪೊಲೀಸ್ರು ಕೂಡ ಬಂದೋಬಸ್ತ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಸಿವಿಲ್, ಸಂಚಾರಿ, ಕೆಎಸ್ ಆರ್ ಪಿ ಪೊಲೀಸ್ರ ಜೊತೆಗೆ ಡಿ ಸ್ವಾಟ್, ಕ್ವಿಕ್ ರೆಸ್ಪಾನ್ಸ್ ಟೀಮ್ ಕೂಡ ಭದ್ರತೆಯಲ್ಲಿ ನಿಯೋಜನೆಗೊಳ್ಳಲಿದ್ದಾರೆ.
 
ಹೆಚ್ ಎ ಎಲ್ ಏರ್ ಪೋರ್ಟ್ ನಲ್ಲಿ ವೈಟ್ ಡಿಸಿಪಿ ಹಾಗೂ ಪೂರ್ವ ವಿಭಾಗದ ಡಿಸಿಪಿ ಬಂದೋಬಸ್ತ್ ಮೇಲ್ವಿಚಾಣೆ ವಹಿಸಿದ್ರೆ.‌ಪೀಣ್ಯದಲ್ಲಿ ಉತ್ತರ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ಬಂದೋಬಸ್ತ್ ನೇತೃತ್ವವಹಿಸಲಿದ್ದಾರೆ. ಇನ್ನೂ ರಸ್ತೆಯುದ್ದಕ್ಕೂ ಪ್ರತಿ ಎರಡು ಕೀಲೋ ಮೀಟರ್ ಗೆ ಒಬ್ಬರಂತೆ  ಓರ್ವ ಡಿಸಿಪಿ  ನೇತೃತ್ವದಲ್ಲಿ ಭದ್ರತೆ ಮಾಡಿಕೊಳ್ಳಲಾಗಿದೆ.ಮಧ್ಯರಾತ್ರಿ ಒಂದು ಗಂಟೆಯಿಂದಲೇ ಭದ್ರತೆಗೆ ನಿಯೋಜನೆ ಗೊಂಡಿರೋ ಅಧಿಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಗುವಂತೆ ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಕೂಟರ್​​ನಲ್ಲಿ ಮಂಡಲದ ಹಾವು ಪ್ರತ್ಯಕ್ಷ