Publish Date: Fri, 25 Aug 2023 (17:05 IST)
Updated Date: Fri, 25 Aug 2023 (14:08 IST)
ಸ್ಕೂಟರ್ ಸೀಟ್ ಕೆಳಗೆ ಹಾವು ಪ್ರತ್ಯಕ್ಷವಾಗಿರುವ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ ವೈಭವ್ ಹೋಟೆಲ್ ಬಳಿ ನಡೆದಿದೆ. ಹಾವು ಕಾಣುತ್ತಿದ್ದಂತೆ ಸ್ಕೂಟರ್ ಬಿಟ್ಟು ಮಹಿಳೆ ಓಡಿಹೋಗಿದ್ದಾಳೆ. ಹೊಂಡಾ ಆಕ್ಟೀವಾ ಡಿಕ್ಕಿಯಲ್ಲಿ ಮಂಡಲದ ಹಾವು ಮಲಗಿತ್ತು. ಇದನ್ನು ಕಂಡು ಮಹಿಳೆ ಕಿರುಚಾಡಿದ್ದಾರೆ. ಬಳಿಕ ಹಾವು ಇರುವುದನ್ನು ನೋಡಿ ಉರಗ ರಕ್ಷಕನಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಸುರಕ್ಷತವಾಗಿ ಹಾವು ಸೆರೆ ಹಿಡಿದಿದ್ದಾರೆ. ಘಟನೆಯಿಂದ ಕೆಲಕಾಲ ಹೋಟೆಲ್ ಮುಂಭಾಗ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.