Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ವಿಷದ ಹಾವು ಇದ್ದಂತೆ : ಮಲ್ಲಿಕಾರ್ಜುನ ಖರ್ಗೆ

ನರೇಂದ್ರ ಮೋದಿ ವಿಷದ ಹಾವು ಇದ್ದಂತೆ : ಮಲ್ಲಿಕಾರ್ಜುನ ಖರ್ಗೆ
ಗದಗ , ಶುಕ್ರವಾರ, 28 ಏಪ್ರಿಲ್ 2023 (10:43 IST)
ಗದಗ : ಮೋದಿ ವಿಷದ ಹಾವು ಇದ್ದಂತೆ, ನೋಡೊಕೆ ಚೆನ್ನಾಗಿರುತ್ತೆ, ಮುಟ್ಟಿದ್ರೆ ವಿಷ ಅಂತ ಗೊತ್ತಾಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
 
ಗದಗ ಜಿಲ್ಲೆ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಮಾತನಾಡಿದ ಅವರು, ಮೋದಿ ಚೆನ್ನಾಗಿದ್ದಾರೆ ಅಂತ ಅವರನ್ನು ನೆಕ್ಕಿ ನೋಡಿದ್ರೆ ಸತ್ತೇ ಹೋಗುತ್ತೀರಿ. ನಾವು ಕನ್ನಡಿಗರು, ನಾವು ಯಾರಿಗೂ ಬಗ್ಗುವುದಿಲ್ಲ. ಗುಜರಾತ್, ಅಹ್ಮದಾಬಾದ್ನಿಂದ ಯಾರೇ ಬರಲಿ ಹೆದರಬೇಡಿ. ನಾವು ಕನ್ನಡಿಗರು, ಕರ್ನಾಟಕದವರು ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ನಮ್ಮ ಸರ್ಕಾರ ಎಂದು ಬರುತ್ತೊ ಅಂದಿನಿಂದ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಮನೆಯ ಯಜಮಾನಿಗೆ 2 ಸಾವಿರ ಸಹಾಯಧನ ಕೊಡುತ್ತೇವೆ. ಕೆಲಸ ಇಲ್ಲದ ಪದವಿದರರಿಗೆ 3 ಸಾವಿರ ಯುವನಿಧಿ ಪ್ರೋತ್ಸಾಹ ನೀಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಘೋಷಿಸಬೇಕು : ಶೋಭಾ ಕರಂದ್ಲಾಜೆ