Select Your Language

Notifications

webdunia
webdunia
webdunia
webdunia

6 ದಿನ 20 ಕ್ಕೂ ಹೆಚ್ಚು ಕಡೆ ನರೇಂದ್ರ ಮೋದಿ ಪ್ರಚಾರ?

6 ದಿನ 20 ಕ್ಕೂ ಹೆಚ್ಚು ಕಡೆ ನರೇಂದ್ರ ಮೋದಿ ಪ್ರಚಾರ?
ಬೆಂಗಳೂರು , ಬುಧವಾರ, 26 ಏಪ್ರಿಲ್ 2023 (07:39 IST)
ಬೆಂಗಳೂರು : ಕರ್ನಾಟಕ ಕುರುಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಣ ಕಾವೇರಿದ್ದು ಏಪ್ರಿಲ್ 29 ರಿಂದ ಮೇ 7ರವರೆಗೆ ಮೋದಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ.
 
6 ದಿನಗಳಲ್ಲಿ 20ಕ್ಕೂ ಹೆಚ್ಚು ರೋಡ್ ಶೋ, ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ವಿಶೇಷವಾಗಿ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಮೋದಿ ಸಮಾವೇಶ ಆಯೋಜನೆ ಆಗುತ್ತಿರುವುದು ವಿಶೇಷ.

ಯಾವ ದಿನ ಎಲ್ಲೆಲ್ಲಿ ಕಾರ್ಯಕ್ರಮ

ಏಪ್ರಿಲ್ 29 – ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ
ಏಪ್ರಿಲ್ 30 – ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
ಮೇ 2 – ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
ಮೇ 3 – ಮೂಡುಬಿದಿರೆ, ಕಾರವಾರ, ಕಿತ್ತೂರು
ಮೇ 6 – ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾ., ಬೆಂಗಳೂರು ದಕ್ಷಿಣ
ಮೇ 7 – ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ