Publish Date: Sun, 20 Feb 2022 (17:34 IST)
Updated Date: Sun, 20 Feb 2022 (15:37 IST)
ಕಳ್ಳರು ಚಾಪೆ ಕೆಳಗೆ ತೂರಿದ್ರೆ, ಖಾಕಿ ಪಡೆ ರಂಗೋಲಿ ಕೆಳಗೆ ನುಸುಳಿ ಖದೀಮರ ಹೆಡೆಮುರಿ ಕಟ್ಟುತ್ತದೆ. ಹೀಗೆ ಸಿಲಿಕಾನ್ ಸಿಟಿಯಲ್ಲಿ ಓವರ್ ಸ್ಮಾರ್ಟ್ ಕಳ್ಳನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಪೊಲೀಸರು(Bengaluru Police) ಮತ್ತೊಮ್ಮೆ ಕಳ್ಳ-ಪೊಲೀಸ್ ಆಟದಲ್ಲಿ ಗೆದ್ದಿದ್ದಾರೆ.
ಅಂದಹಾಗೆ ಸುಬ್ರಮಣ್ಯಪುರ ಠಾಣಾ(Subramanyapura Police Station) ವ್ಯಾಪ್ತಿಯಲ್ಲಿ ಈ ಕಳ್ಳ-ಪೊಲೀಸ್ ಆಟ ನಡೆದಿದೆ. ಫೆಬ್ರವರಿ 8ರ ಮಧ್ಯರಾತ್ರಿ ಆರೋಪಿ ಕಾರ್ತಿಕ್ ಅಲಿಯಾಸ್ ಕಾಟು ಎಂಬಾತ ನಂದಿನಿ ಪಾರ್ಲರ್(Nandini Milk Parlour) ದೋಚಿದ್ದ. ಈತನಿಗೆ ಮತ್ತೊಬ್ಬ ಚೋರನೂ ಸಾಥ್ ನೀಡಿದ್ದ. ನಂದಿನಿ ಪಾರ್ಲರ್ ಶೆಟರ್ ಬೀಗ ಹೊಡೆದು ಕಳ್ಳಬೆಕ್ಕಿನಂತೆ ಒಳನುಗ್ಗಿ ಇಬ್ಬರೂ ಸೇರಿ ಹಣ ದೋಚಿ ಎಸ್ಕೇಪ್ ಆಗಿದ್ದರು. ಈ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.