Publish Date: Sun, 20 Feb 2022 (14:55 IST)
Updated Date: Sun, 20 Feb 2022 (15:24 IST)
ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ ಮುಂದುವರಿದಿದೆ. ಇಂದು ಮುಂಜಾನೆ ವಿಧಾನಸೌಧದ ಮುಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಚ್ಛತೆ ಪರಿಶೀಲಿಸಿದರು. ಸ್ವಚ್ಛತೆ ಹಾಗೂ ಸಣ್ಣಪುಟ್ಟ ಡ್ಯಾಮೇಜ್ ಕುರಿತು ಪರಿಶೀಲನೆ ಮಾಡಿದರು.
ಪರಿಶೀಲನೆ ಬಳಿಕ ಹೇಳಿಕೆ ನೀಡಿದ ಸಿದ್ದರಾಮಯ್ಯ, ವಿಧಾನಸೌಧದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯಲಾಗುತ್ತಿದೆ. ವಾಹನ ಗುದ್ದಿ ಮುಖ್ಯದ್ವಾರದಲ್ಲಿ ಸಣ್ಣ ಡ್ಯಾಮೇಜ್ ಆಗಿದೆ. ವಿಧಾನಸೌಧದ ಸ್ವಚ್ಛತೆ ಕುರಿತು ಸಿಎಸ್ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.