Select Your Language

Notifications

webdunia
webdunia
webdunia
webdunia

ಮಕ್ಕಳಿಲ್ಲವೆಂದು ಹಂಗಿಸಿದ್ದಕ್ಕೆ ನೇಣಿಗೆ ಶರಣಾದ ಪೊಲೀಸ್ ದಂಪತಿ

ಅಪರಾಧ ಸುದ್ದಿಗಳು
ಬೆಂಗಳೂರು , ಶನಿವಾರ, 19 ಡಿಸೆಂಬರ್ 2020 (09:43 IST)
ಬೆಂಗಳೂರು: ಮಕ್ಕಳಾಗಿಲ್ಲವೆಂದು ಪದೇ ಪದೇ ಎಲ್ಲರೂ ಪ್ರಶ್ನಿಸುತ್ತಿದ್ದರಿಂದ ಬೇಸತ್ತ ಪೊಲೀಸ್ ದಂಪತಿ ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.


ಎಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಸುರೇಶ್ ಮತ್ತು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಬಿ. ಶೀಲಾ ಮೃತ ದಂಪತಿ. ಗುರುವಾರ ರಾತ್ರಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದ ದಂಪತಿ ಈ ಕೃತ್ಯವೆಸಗಿದ್ದಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗದ ಕಾರಣ ಮನೆಗೆ ಬಂದ ಸಹೋದ್ಯೋಗಿಗಳಿಗೆ ಇಬ್ಬರೂ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. 10 ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಸಂಬಂಧಿಕರು ಮಕ್ಕಳಾಗದ ವಿಚಾರವಾಗಿ ಪ್ರಶ್ನಿಸುತ್ತಿದ್ದರಿಂದ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಇಬ್ಬರೂ ಗುರುವಾರ ರಾತ್ರಿ ಜಗಳವಾಡಿಕೊಂಡಿದ್ದಾರೆ. ಬಳಿಕ ಶೀಲಾ ನೇಣು ಹಾಕಿಕೊಂಡಿದ್ದು, ಇದನ್ನು ನೋಡಿ ನಿನ್ನೆ ಮುಂಜಾನೆ ಪತಿ ಸುರೇಶ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯನ್ನಾಧರಿಸಿ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿವೈಎಸ್ ಪಿ ಲಕ್ಷ್ಮೀ ಮೊಬೈಲ್ ಗಾಗಿ ಪೊಲೀಸರ ಹುಡುಕಾಟ