Publish Date: Thu, 05 Oct 2023 (15:00 IST)
Updated Date: Thu, 05 Oct 2023 (16:37 IST)
ನಗರದ ಗಾಂಧಿನಗರದ ಲಾಡ್ಜ್ ಮೇಲೆ ದಾಳಿ ಮಾಡಿ ಒಂದು ಗಂಟೆ ಉಪ್ಪಾರಪೇಟೆ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ.ದಾಳಿ ವೇಳೆ ಕೋಟಿ , ಕೋಟಿ ಹಣ ಸಿಕ್ಕಿದೆ ಅನ್ನೋ ಮಾಹಿತಿ ತಿಳಿದುಬಂದಿದೆ.ಆದರೆ ಈ ವಿಚಾರವಾಗಿ ಏನು ನಡೆದಿಲ್ಲ ಎಂದು ಪೊಲೀಸರು ಹೇಳ್ತಿದ್ದಾರೆ.ಪೊಲೀಸರು ಬಂದು ಪರಿಶೀಲನೆ ನಡೆಸಿರೊ ದೃಶ್ಯ ಕೂಡ ಲಭ್ಯವಾಗಿದ್ದು,ಗಾಂಧಿನಗರದಲ್ಲಿರುವ ಸರಸ್ವತಿ ಲಾಡ್ಜ್ ಮೇಲೆ ದಾಳಿ ಮಾಡಿರುವ ವಿಚಾರ ಲಾಡ್ಜ್ ಮಾಲೀಕ ಒಪ್ಪಿಕೊಂಡಿದ್ದಾರೆ.ಇದೇ ವಿಚಾರವಾಗಿ ಯಾವ ದೂರು ಕೂಡ ದಾಖಲಾಗಿಲ್ಲ.ಪೊಲೀಸರಿಂದ ಪ್ರಕರಣ ಮುಚ್ಚಿ ಹಾಕೊ ಯತ್ನ ಮಾಡಲಾಗ್ತಿದ್ಯಾ? ಅನ್ನುವ ಅನುಮಾನ ವ್ಯಕ್ತವಾಗ್ತಿದ್ದು,ರಾಜಕಾರಣಿ ಒಬ್ಬರಿಗೆ ಹಣ ಕೊಡಲು ಪೊಲೀಸರು ಬಂದಿದ್ರು ಅನ್ನೋ ಮಾಹಿತಿ ಕೇಳಿಬರುತ್ತಿದೆ.