Publish Date: Thu, 11 Nov 2021 (09:50 IST)
Updated Date: Thu, 11 Nov 2021 (09:52 IST)
ಬೆಂಗಳೂರು: 32 ಬೈಕ್ ಕದ್ದ ಅಂತರ್ ರಾಜ್ಯ ಖದೀಮನೊಬ್ಬನನ್ನು ಕೊನೆಗೂ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತ 25 ಲಕ್ಷ ಮೌಲ್ಯದ 32 ಬೈಕ್ ಗಳನ್ನು ಕದ್ದಿದ್ದಾನೆ ಎನ್ನಲಾಗಿದೆ. ತಮಿಳುನಾಡಿನ ಶರತ್ ಬಾಬು ಎಂಬಾತ ಬಂಧಿತ. ಈತನನ್ನು ಆನೆಕಲ್ ಉಪವಿಭಾಗದ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನಲ್ಲಿ ಪದೇ ಪದೇ ಬೈಕ್ ಕಳ್ಳತನ ಹೆಚ್ಚಾದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದೀಗ ಬೈಕ್ ಕದ್ದು ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.