Publish Date: Fri, 23 Nov 2018 (14:41 IST)
Updated Date: Fri, 23 Nov 2018 (14:43 IST)
ಆ ಯುವಕ ಯುವತಿ ಒಂದೇ ಗ್ರಾಮದವರು. ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿ ಯುವಕನ ಸಾವಿನಲ್ಲಿ ಅಂತ್ಯಕಂಡಿದೆ.
ಪ್ರೀತಿಸುತ್ತಿದ್ದ ಯುವಕ ಯುವತಿ ಜೊತೆಗಿದ್ದ ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಮನನೊಂದ ಪ್ರೇಮಿಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯುವಕ ಸಾವನ್ನಪ್ಪಿದ್ದರೆ, ಯುವತಿ ಪ್ರಾಣಪಾಯದಿಂದ ಪಾರಾಗಿದ್ದಾಳೆ.
ಶಿವಮೊಗ್ಗದ ಅಯನೂರು ಬಳಿಯ ಹೊಸರಮಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರೀತಿಸಿದ ಯುವತಿ ಅಪ್ರಾಪ್ತ ಬಾಲಕಿಯಾಗಿದ್ದರೆ, ಸಂಜಯ್ (21) ಸಾವನ್ನಪ್ಪಿದ ಯುವಕನಾಗಿದ್ದಾನೆ.
2 ವರ್ಷದಿಂದ ಒಂದೇ ಗ್ರಾಮದ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರೇಮಿಗಳು ಓಡಾಟ- ಸುತ್ತಾಟ ನಡೆಸುತ್ತಿದ್ದ ವಿಡಿಯೋ ವನ್ನ ಮಾಡಿಕೊಂಡು ಹಣಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಕೆಲವು ಯುವಕರು.
ಹಣ ಕೂಡಲು ಸಾಧ್ಯವಾಗದೆ ಇದ್ದದ್ದಕ್ಕೆ ಮನನೊಂದು ಪ್ರೇಮಿಗಳು ಆತ್ಮಹತ್ಯೆ ಗೆ ಯತ್ನಿಸಿದ್ದರು.
ಕೂಡಲೇ ಇಬ್ಬರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೃಷ್ಟವಶಾತ್ ಯವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.