Webdunia - Bharat's app for daily news and videos

Install App

ಪಿಸ್ತೂಲ್ ಸ್ಮಗ್ಲರ್ ಬಂಧನ

Webdunia
ಭಾನುವಾರ, 20 ಮಾರ್ಚ್ 2022 (17:57 IST)
ಸಿಟಿನಲ್ಲಿ ಪಿಸ್ತೂಲ್ ಸ್ಮಗ್ಲರ್ ಬಂಧನ ಮಾಡಲಾಗಿದೆ. ಮಹಾರಾಷ್ಟ್ರದಿಂದ ಕಡಿಮೆ ಬೆಲೆಗೆ ಖರೀದಿಸಿ ನಗರದ ರೌಡಿಗಳಿಗೆ, ಕ್ರಿಮಿನಲ್​ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಶಕೀಲ್ ಅಹ್ಮದ್ ಬಂಧಿತ ಆರೋಪಿ. 21 ವರ್ಷಕ್ಕೆ ಗನ್ ಡೀಲಿಂಗ್​​ಗೆ ಇಳಿದಿದ್ದ ಆರೋಪಿ, ಹಲವು ಬಾರಿ ಜೈಲು ಸೇರಿದ್ರು  ಕೃತ್ಯ ಬಿಟ್ಟಿರಲಿಲ್ಲ. 2019ರಲ್ಲಿ ಸಿಸಿಬಿ ಅಧಿಕಾರಿಗಳು ಶಕೀಲ್ ಅಹ್ಮದ್​ನನ್ನ ಬಂಧಿಸಿದ್ದರು. 2016 ರಲ್ಲಿ ಸಂಪಿಗೆಹಳ್ಳಿ ಪೊಲೀಸರು ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿಲಾಗಿತ್ತು. ಬಳಿಕ ಮತ್ತೆ ಗನ್ ಡೀಲ್​ಗೆ ಆರೋಪಿ ಇಳಿದಿದ್ದ. ಆರೋಪಿಯಿಂದ 2 ಪಿಸ್ತೂಲ್ 4 ಜೀವಂತ ಗುಂಡು ವಶ ಪಡಿಸಿಕೊಳ್ಳಲಾಗಿದೆ. 50 ರಿಂದ 1 ಲಕ್ಷಕ್ಕೆ ಪಿಸ್ತೂಲ್ ಮಾರಾಟ ಮಾಡ್ತಿದ್ದ. ಮಹಾರಾಷ್ಟ್ರದ ಅಮರಾವತಿಯಿಂದ ಕಡಿಮೆ ಬೆಲೆಗೆ ಪಿಸ್ತೂಲ್ ಖರೀದಿಸುತ್ತಿದ್ದು, ವೆಪನ್ ಡೀಲಿಂಗ್​ನಲ್ಲಿ ಸಕ್ರೀಯವಾಗಿರುವ ಉದ್ದೇಶದಿಂದ ಸ್ಮಗ್ಲಿಂಗ್ ಮಾಡುತ್ತಿದ್ದ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ಶಕೀಲ್ ಅಹ್ಮದ್, ರಿಯಲ್ ಎಸ್ಟೇಟ್ ನಡೆಸಲು, ಬೆದರಿಕೆ ಹಾಕಲು ಪಿಸ್ತೂಲ್ ಉಪಯೋಗಿಸುತ್ತಿದ್ದ. ಉತ್ತಮ ಗುಣಮಟ್ಟದ ವೆಪನ್​ಗಳನ್ನ ಮಾರಾಟ ಮಾಡ್ತಿದ್ದ. ಈಗ ಮತ್ತೆ ಬಾಣಸ್ವಾಡಿ ಪೊಲೀಸರಿಗೆ ಆರೋಪಿ ಸಿಕ್ಕಿಬಿದಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments