Publish Date: Sun, 25 Sep 2022 (20:19 IST)
Updated Date: Sun, 25 Sep 2022 (20:20 IST)
ಬೆಂಗಳೂರು-ಮೈಸೂರು ಹೆದ್ದಾರಿಯ ಕೆಂಗಲ್ ಗ್ರಾಮದ ಬಳಿ ಪೈಪ್ ಲೈನ್ ವಾಲ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗ್ರಾಮಗಳಿಗೆ ಈ ಪೈಪ್ ಲೈನ್ ನೀರನ್ನು ಪೂರೈಸುತ್ತದೆ. ರಾಮನಗರ ನಗರಕ್ಕೆ ಕಾವೇರಿ ನೀರು ಒದಗಿಸುವ ಪೈಪ್ ಲೈನ್ ಇದಾಗಿದೆ. ಬೆಳಗ್ಗೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ರಸ್ತೆ ಮೇಲೆ ನೀರು ಹರಿದು ಬರ್ತಿದೆ. ಜೀವಜಲ ನಷ್ಟವಾಗಿ ಪೋಲಾಗ್ತಿದ್ರೂ ಸಹ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಪೈಪ್ ಲೈನ್ ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿ ಎಂದು ಸಾರ್ವಜನಿಕರು ಆಗ್ರಹ ಮಾಡ್ತಿದ್ದಾರೆ.