Publish Date: Sun, 25 Sep 2022 (17:02 IST)
Updated Date: Sun, 25 Sep 2022 (14:52 IST)
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ತಮ್ಮ ಪುತ್ರ ಆವ್ಯಾನ್ ದೇವ್ ಮೊದಲ ಹುಟ್ಟುಹಬ್ಬವನ್ನು ಶನಿವಾರ ಸರಳವಾಗಿ ಆಚರಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಅವರು ಮರಿ ಮೊಮ್ಮಗನನ್ನು ಆಶೀರ್ವದಿ ಸಿದರು.
ನಿನ್ನೆ ಸಂಜೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಕೇಕ್ ಕತ್ತರಿಸಿ ಆವ್ಯಾನ್ ದೇವ್ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್.ಡಿ. ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಮರಿ ಮೊಮ್ಮಗನನ್ನು ಆಶೀರ್ವದಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ನಿವಾಸದಲ್ಲಿಯೂ ಕೇಕ್ ಕತ್ತರಿಸಿ ಮೊಮ್ಮಗನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು