Select Your Language

Notifications

webdunia
webdunia
webdunia
webdunia

ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಭಾಗಕ್ಕೆ ಮರದ ತುಂಡು ಹಾಕಿದ ನೀಚ

ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಭಾಗಕ್ಕೆ ಮರದ ತುಂಡು ಹಾಕಿದ ನೀಚ
ಮುಂಬೈ , ಸೋಮವಾರ, 26 ಅಕ್ಟೋಬರ್ 2020 (10:54 IST)
ಮುಂಬೈ : ಶಾಪಿಂಗ್ ಕಾಂಪ್ಲೆಕ್ಸ್ ಒಳಗೆ ನುಗ್ಗಿ ಎಂಬ 8 ವರ್ಷದ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಪೊವಾಯಿ ಪ್ರದೇಶದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಅಲ್ಲಿಗೆ ಹೋದಾಗ ನಾಯಿ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿತ್ತು. ಆಗ ನಾಯಿಯ ಖಾಸಗಿ ಭಾಗಗಳಲ್ಲಿ 11 ಇಂಚಿನ ಮರದ ತುಂಡುಗಳನ್ನು ಹಾಕಲಾಗಿತ್ತು. ತಕ್ಷಣ ಮಹಿಳೆ ನಾಯಿಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಮರದ ತುಂಡನ್ನು ತೆಗೆದು ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ನಾಯಿಯ ಸ್ಥಿತಿ ಬಹಳ ಗಂಭೀರವಾಗಿದೆ ಎನ್ನಲಾಗಿದೆ.

 ಈ ಬಗ್ಗೆ ಬಾಂಬೆ ಅನಿಮಲ್ ರೈಟ್ಸ್ (ಬಿಎಆರ್)  ಪೊವಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಂತಹ ನೀಚ ಕೃತ್ಯ ಎಸಗಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಡ್ಡು ಸಿಗುತ್ತೆ ಎಂದರೆ ಎಂಥಾ ಕೆಲಸಕ್ಕೂ ಸೈ ಈ ಪತಿರಾಯ!