Publish Date: Sat, 24 Oct 2020 (10:20 IST)
Updated Date: Sat, 24 Oct 2020 (10:45 IST)
ಮುಂಬೈ : ಆಟವಾಡುವ ನೆಪದಲ್ಲಿ 11 ವರ್ಷದ ಬಾಲಕಿಯನ್ನು ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 14 ವರ್ಷದ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ತಾಯಿ ಮತ್ತು ಸಹೋದರನ ಜೊತೆ ವಾಸವಾಗಿದ್ದಾಳೆ, ಆಕೆ ದಿನಸಿ ತರಲು ಹೋಗುವಾಗ ಎದುರಿಗೆ ಬಂದ ಆರೋಪಿ ಒಟ್ಟಿಗೆ ಸೇರಿ ಆಟವಾಡುವ ಎಂದು ತನ್ನ ಮನೆಗೆ ಕರೆದುಕೊಂಡು ಬಂದು ಟೆರೆಸ್ ಮೇಲೆ ಕರೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾನೆ. ಹಾಗೇ ಈ ವಿಚಾರ ಯಾರಿಗಾದರೂ ತಿಳಿಸಿದರೆ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಆದರೆ 3 ದಿನಗಳ ಬಳಿಕ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.