Select Your Language

Notifications

webdunia
webdunia
webdunia
webdunia

ಐಪಿಎಲ್ 13: ಮುಂಬೈಗಿಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಸಿಎಸ್ ಕೆ ಸವಾಲು

ಐಪಿಎಲ್ 13: ಮುಂಬೈಗಿಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಸಿಎಸ್ ಕೆ ಸವಾಲು
ದುಬೈ , ಶುಕ್ರವಾರ, 23 ಅಕ್ಟೋಬರ್ 2020 (09:57 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈಗೆ ಪ್ಲೇ ಆಫ್ ಕನಸು ಬಹುತೇಕ ಮುಗಿದಿದೆ. ಹೀಗಾಗಿ ಇದು ಔಪಚಾರಿಕ ಪಂದ್ಯವಾಗಲಿದೆ.


ಹಾಗಿದ್ದರೂ ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಈ ಕೂಟವನ್ನು ಜಯದೊಂದಿಗೇ ಮುಕ್ತಾಯಗೊಳಿಸಲು ಬಯಸಬಹುದು. ಹೀಗಾಗಿ ಧೋನಿ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯವಾಗಲಿದೆ. ಅತ್ತ, ರೋಹಿತ್ ಶರ್ಮಾ ಪಡೆ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೂಪರ್ ಓವರ್ ನಲ್ಲಿ ಆಘಾತಕಾರಿ ಸೋಲನುಭವಿಸಿದ್ದನ್ನು ಮರೆತಿಲ್ಲ. ಹೀಗಾಗಿ ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಸುಧಾರಿಸಲು ಪ್ರಯತ್ನ ನಡೆಸಲಿದೆ. ಪಂದ್ಯ ಸಂಜೆ  7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರ ಕುಟುಂಬಸ್ಥರಿಗೆ ಆಸ್ಟ್ರೇಲಿಯಾಕ್ಕೆ ನೋ ಎಂಟ್ರಿ