Publish Date: Thu, 22 Oct 2020 (10:04 IST)
Updated Date: Thu, 22 Oct 2020 (10:06 IST)
ದುಬೈ: ಐಪಿಎಲ್ 13 ರಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ನಿರೀಕ್ಷೆಯಂತೇ ಮತ್ತೊಂದು ಆಘಾತ ಸಿಕ್ಕಿದೆ.
ಸಿಎಸ್ ಕೆ ತಂಡದ ಸ್ಟಾರ್ ಆಲ್ ರೌಂಡರ್ ಡ್ವಾನ್ ಬ್ರಾವೋ ತೊಡೆ ಗಾಯದಿಂದಾಗಿ ಐಪಿಎಲ್ ನಿಂದಲೇ ಹೊರಬಿದ್ದಿದ್ದಾರೆ. ಇನ್ನು ಸಿಎಸ್ ಕೆ ನಾಲ್ಕು ಪಂದ್ಯಗಳನ್ನಾಡಲಿದ್ದು, ಈ ಪಂದ್ಯಗಳಲ್ಲಿ ಆಡುವ ಕ್ಷಮತೆಯಿಲ್ಲದ ಕಾರಣ ಬ್ರಾವೋ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಒಟ್ಟು ಆರು ಪಂದ್ಯಗಳನ್ನಾಡಿದ್ದ ಬ್ರಾವೋ 6 ವಿಕೆಟ್ ಕಬಳಿಸಿದ್ದರು. ತಕ್ಷಣವೇ ಅವರು ತಮ್ಮ ತವರಿಗೆ ಮರಳಲಿದ್ದಾರೆ.